|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಜ್ಞಾನಿಗಳೆಂಬುವರು ಈ ಪ್ರಪಂಚಕ್ಕೆ ಹೊರತಾದ, ವಿಚಿತ್ರ ಮನೋಧರ್ಮದ ಅಸಾಮಾನ್ಯ ನಡವಳಿಕೆಯ ವಿಜಾತೀಯ ಜನ ಎಂಬ ಒಂದು ಭಾವನೆ ಇದೆ. ನಿಜವಾಗಿ ನೋಡಿದರೆ, ಅವರೂ ಎಲ್ಲರಂತೆ ಮನುಷ್ಯರೇ. ಅವರಿಗೂ ಹಸಿವು ನೀರಡಿಕೆಗಳಾಗುತ್ತವೆ; ಅವರೂ ಎಲ್ಲರಂತೆ ಮನುಷ್ಯರೇ. ನಿತ್ಯಜೀವನದಲ್ಲಿ ನಮ್ಮ ನೇರ ಅನುಭವಕ್ಕೆ ಬರದಿರುವ ಯಾವುದೋ ಆಕಾಶಕಾಯಗಳ ಚಲನವಲನಗಳಲ್ಲಿ, ಅಣುಪರಮಾಣುಗಳ ವ್ಯವಹಾರಗಳಲ್ಲಿ, ಜೀವಕೋಶದ ಅಂತರಾಳದಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಅವರಿಗೆ ಗಾಢವಾದ ಆಸಕ್ತಿ. ಅನೇಕ ವೇಳೆ ಅವರ ವರ್ತನೆ ಅವರಿಗೇನೋ ಸಹಜವಾಗಿ ಕಂಡರೂ, ಅದು ಸಾಮಾನ್ಯ ನಡವಳಿಕೆಯ ಎಲ್ಲೆಯನ್ನು ಮೀರುದುದಾಗಿದ್ದು, ಇತರರ ದೃಷ್ಟಿಯಲ್ಲಿ ಸ್ವಲ್ಪ ವಿಚಿತ್ರವಾಗಿ ಕಾಣಿಸುವುದುಂಟು. ಇದೇ ಕಾರಣವಾಗಿ, ಅವರನ್ನು ಕುರಿತು ಅನೇಕ ದಂತಕಥೆಗಳು ಹುಟ್ಟಿಕೊಂಡಿವೆ. ಈ ಸಂಕಲನದಲ್ಲಿ ಬಗೆಬಗೆಯ ಕಥೆಗಳಿವೆ. ಕೆಲವು ನಿಜವಾಗಿಯೂ ನಡೆದ ಘಟನೆಗಳು; ಇನ್ನು ಕೆಲವು ವಾಸ್ತವ ಘಟನೆಗಳ ಉತ್ಪ್ರೇಕ್ಷಿತ ರೂಪಗಳು. ಇವಲ್ಲದೆ, ಬೇಕೆಂದೇ ಹುಟ್ಟುಹಾಕಿದ ಕಥೆಗಳೂ ಕೆಲವಿರಬಹುದು. ಈ ಕೃತಿಯಲ್ಲಿ ವಿಜ್ಞಾನಿಗಳ ಹಸುಳೆ ಸ್ವಭಾವ, ವಿನೋದಪ್ರಿಯತೆ, ಮಾನವೀಯತೆ ಮತ್ತು ಮರೆಗುಳಿತನದ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀ ಮೂರ್ತಿಯವರ ಚಿತ್ರಗಳು ಹಾಸ್ಯ ಪ್ರಸಂಗಗಳಿಗೆ ಮತ್ತಷ್ಟು ಮೆರಗು ನೀಡುತ್ತವೆ.
|
| |
|
|
|
|
|
|
|
|
|