|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿದ್ಯಾಸಾಗರರ ಮುಗಿಯದ ನಡಿಗೆ
201 ವರ್ಷಗಳ ಹಿಂದೆ ಈ ನೆಲದಲ್ಲಿ ಆಧುನಿಕ ವೈಜ್ಞಾನಿಕ ಶಿಕ್ಷಣಕ್ಕಾಗಿ ದನಿ ಎತ್ತಿದ ವಿದ್ಯಾಸಾಗರ, ಭಾರತೀಯ ನವೋದಯದ ಅನನ್ಯ ಸೃಷ್ಟಿ, ಮಹಿಳಾ ಶಿಕ್ಷಣ ಮತ್ತು ವಿಧವಾ ವಿವಾಹಗಳ ಪರವಾಗಿ ಹಾಗೂ ಬಹುಪತ್ನಿತ್ವದ ನಿಷೇಧಕ್ಕಾಗಿ ಹೋರಾಡಿದ ಅವರನ್ನು ನಾವು ರಾಜಾ ರಾಮ್ಮೋಹನ್ ರಾಯ್, ಮಹಾತ್ಮ ಪುಲೆ, ಸಾವಿತ್ರಿ ಬಾಯಿ ಪುಲೆ ಅವರೊಂದಿಗೆ ನೆನಪಿಸಿಕೊಳ್ಳುತ್ತೇವೆ, ಜಾತಿ, ಧರ್ಮಗಳನ್ನು ಮೀರಿದ ಕರುಣಾಹೃದಯಿ ವಿದ್ಯಾಸಾಗರರನ್ನು ಈ ನೆಲ ಎಂದಿಗೂ ಮರೆಯಬಾರದು. ತನಗೆ ಸರಿ ಅನಿಸಿದ್ದನ್ನು ಮಾಡಲು ಎಂದಿಗೂ ಹಿಂದೆಗೆಯದ, ವೈಯಕ್ತಿಕ ಕಷ್ಟ ನಷ್ಟಗಳಿಗೆ, ಅವಾಯಕ್ಕೆ ಹೆದರದ ಈತ ಒಬ್ಬ ಪುರುಷಸಿಂಹ, ತನ್ನ ನಂಬಿಕೆ, ತತ್ವ, ಮೌಲ್ಯಗಳಿಗಾಗಿ ಸರ್ವಸ್ವವನ್ನೂ, ಅಸ್ತೇಷ್ಟರನ್ನೂ ಕಳೆದುಕೊಳ್ಳಲು ಹಿಂಜರಿಯದ ಈತನ ಮಾದರಿ ಅನುಸರಿಸಲು ಸುಲಭವಲ್ಲ, ಹಾಗಾಗಿಯೇ ಈತ ಚಿರಂತನ ಸ್ಫೂರ್ತಿಯ ಸೆಲೆ. ಈ ಹೊತ್ತು ನಮ್ಮ ದೇಶ ಜಾತಿವಾದ-ಕೋಮುವಾದ, ಮೌಡ್ಯ, ಸಿನಿಕತನಗಳ ದಾವಾನಲದಲ್ಲಿ ಬೇಯುತ್ತಿರುವಾಗ ಇಂತಹ ಮಹಾ ಪುರುಷರನ್ನು ಸ್ಮರಿಸುವುದು, ಅರಿಯುವುದು ಒಂದು ಚಾರಿತ್ರಿಕ ಅಗತ್ಯತೆ
|
| |
|
|
|
|
|
|
|
|
|