Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ವಾಲ್ಮೀಕಿಯ ನೆವದಲ್ಲಿ : ಸಮಕಾಲೀನ ಜಗತ್ತಿಗೊಂದು ಮುಖಾಮುಖಿ
ಲೇಖಕರು: ಅನಂತಮೂರ್ತಿ ಯು ಆರ್, Ananthamurthy U R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 312
ಪುಸ್ತಕದ ಗಾತ್ರ : 1/8 Demy Size
ಕೋಡ್ : 137247

ಅನಂತಮೂರ್ತಿ ಅವರ ಸಂಸ್ಕಾರ, ಅವಸ್ಥೆ ಮುಂತಾದ ಕಾದಂಬರಿಗಳು, ಸೂರ್ಯನ ಕುದುರೆ ಮತ್ತು ಇತರ ಕಥೆಗಳು ಹಾಗು ಅವರ ಹಲವು ಪದ್ಯಗಳಿಗೆ ಪ್ರಸ್ತುತ ಸಂಕಲನದ ಬರಹಗಳ ಜೊತೆಗೆ ಸಮಾನ ಮನೋಧರ್ಮದ ಸಂಬಂಧವಿದೆ. ಅವರ ಕತೆ, ಕಾದಂಬರಿ ಮತ್ತು ಕಾವ್ಯಕ್ಕೂ ಈ ಪ್ರಬಂಧಗಳಿಗೂ ನಡುವೆ ಇನ್ನೊಂದು ಸಮಾನ ಗುಣವಿದೆ. ತಮ್ಮ ಪ್ರಬಂಧಗಲಲ್ಲಿ ಎಲ್ಲಿಯೂ ಅವರು ಇದೇ ಕೊನೆಯ ಮಾತು ಎಂಬಂತೆ ಏನೂ ಹೇಳುವುದಿಲ್ಲ. ಕಪ್ಪು-ಬಿಳಿಪು, ಸರಿ-ತಪ್ಪು. ಅದು ಅಥವಾ ಇದು ಎಂದು ಜಗತ್ತಿನ ಬಗ್ಗೆ ಸರಳ ತೀರ್ಮಾನಗಳಿಗೆ ಬರುವುದು. ಪಕ್ಷ ವಹಿಸಿ ಮಾತನಾಡುವುದು, ತನ್ನ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಅನುಭವವನ್ನು ಒಂದೋ ಅಲ್ಲಗಳೆಯುವುದು. ಅಥವಾ ಅಂತಹ ಅನುಭವಕ್ಕೇ ತನ್ನನ್ನು ಒಡ್ಡಿಕೊಳ್ಳದ ಜಡನಾಗುವುದು ಸುಲಭವೂ ಆ ಕಾರಣಕ್ಕೇನೇ ಬಹಳಬೇಗ ಚಟವೂ ಆಗುವ ಬರವಣಿಗೆಯ ಈ ಸಲೀಸು ನಮೂನೆಗಳು ಅನಂತಮೂರ್ತಿಯವರ ಜಾಯಮಾನದಲ್ಲೇ ಇಲ್ಲ. ಹೀಗಾಗಿ ಹೊರದಾರಿಗಳಿಲ್ಲದ ಇಬ್ಬಂದಿತನದಲ್ಲಿ ತಾನೂ ಸಿಕ್ಕಿಕೊಂಡು ಅವರು ಓದುಗರನ್ನೂ ದಿಕ್ಕುತಪ್ಪಿಸುತ್ತಾರೆ. ಅವರ ತೊಳಲಾಟವನ್ನು ಇಬ್ಬಂದಿತನ ಎಂದು ಕರೆಯುವುದೂ ಪ್ರಾಯಶಃ ಅಷ್ಟು ಸರಿಯಲ್ಲ. ಆ ನುಡಿಗಟ್ಟು ಸೂಚಿಸುವುದು ಎರಡು ಸ್ಥಿತಿಗಳ ನಡುವೆ ಆಯ್ಕೆಯ ಸಮಸ್ಯೆಯನ್ನು. ಆದರೆ ಅನಂತಮೂರ್ತಿಯವರಾದರೋ ಹಲವು ದೋಣಿಗಳಲಿ ಕಾಲಿಟ್ಟು ದಡ ಸೇರಲು ಯತ್ನಿಸುತ್ತಿರುವವರು.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
10%
ಶತಮಾನದ ಕವಿ ಯೇಟ್ಸ್
ಅನಂತಮೂರ್ತಿ ಯು ಆರ್, Ananthamurthy U R
Rs. 75    Rs. 68
Rs. 75    Rs. 68
Rs. 150    Rs. 135
10%
ಎಂದೆಂದೂ ಮುಗಿಯದ ಕಥೆ ....
ಅನಂತಮೂರ್ತಿ ಯು ಆರ್, Ananthamurthy U R
Rs. 60    Rs. 54
Best Sellers
ಉತ್ತಿಷ್ಠ - ಜಗದ ಕವಿ ಕುವೆಂಪುಅವರ ರಾಷ್ಟ್ರೀಯ ದೃಷ್ಟಿ
ನಿರೂಪ, Nirupa
Rs. 54/-
ನಮ್ಮ ಪ್ರಪಂಚ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ, Sapna
Rs. 252/-   Rs. 280
ಸಾಧಕನ ಹೆಜ್ಜೆಗಳು - ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಬದುಕು - ಸಾಧನೆ
ಅನಂತರಾಮು ಟಿ ಆರ್, Anantharamu T R
Rs. 135/-   Rs. 150
ಸರ್ವರಿಗೂ ಆಯುರ್ವೇದ - ಸಂಗ್ರಹ ಅನುವಾದ
ಟಿ ಎಂ ಶಿವಾನಂದಯ್ಯ, T M Shivanandaiah
Rs. 270/-   Rs. 300

Latest Books
ಧಾರವಾಡದ ಪಡ್ಡೆದಿನಗಳು
ರಾಜೇಂದ್ರ ಚೆನ್ನಿ, Rajendra Chenni
Rs. 45/-   Rs. 50
ಸತ್ತು : ಕಾದಂಬರಿ
ಕರಣಂ ಪವನ್ ಪ್ರಸಾದ್, Karanam Pavan Prasad
Rs. 108/-   Rs. 120
ಶ್ಲೋಕಾಭಿರಾಮ : ನಿತ್ಯ ಬೆಳಗಿಗೊಂದು ಸುಭಾಷಿತ
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 135/-   Rs. 150
ಕುವೆಂಪು ಸಾಹಿತ್ಯ : ನಾಲ್ಕು ನೋಟ (ವಿಚಾರ ವಿಮರ್ಶೆ)
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 72/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.