Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 180   
10%
 
 
Rs. 162/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ISBN : 9789383052134
ಕೋಡ್ : 178585

ಡಾ. ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ ‘ವಿಂಗ್ಸ್ ಆಫ್ ಫಯರ್’. ಪ್ರಸ್ತುತ ‘ಟರ್ನಿಂಗ್ ಪಾಯಿಂಟ್ಸ್’ನಲ್ಲಿ ಅವರ ಆಮೇಲಿನ, ನಂಬಲಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು ಮಹತ್ವಪೂರ್ಣ ವಿವಾದಾತ್ಮಕ ವಿಷಯಗಳನ್ನು ಮೊಟ್ಟಮೊದಲ ಬಾರಿಗೆ ಚರ್ಚಿಸಿದ್ದಾರೆ. ಈವರೆಗೆ ಅಷ್ಟಾಗಿ ತಿಳಿದಿರದ ಅವರ ವೃತ್ತಿಜೀವನದ ಹಾಗೂ ಅವರು ರಾಷ್ಟ್ರಪತಿಯಾದ ನಂತರದ ಅನುಭವಗಳು ಇಲ್ಲಿ ಹರಳುಗಟ್ಟಿವೆ. ಡಾ.ಕಲಾಂ ಅವರ ಅದ್ವಿತೀಯ ವ್ಯಕ್ತಿತ್ವದ ಬಗೆಗೆ ಅಪೂರ್ವ ಒಳನೋಟಗಳಿರುವ ಈ ಕೃತಿಯಲ್ಲಿ ಮಹಾನ್ ಪರಂಪರೆಯುಳ್ಳ ಒಂದು ದೇಶ ದುಡಿಮೆಯ ಮೂಲಕ, ಸತತ ಪ್ರಯತ್ನದ ಮೂಲಕ, ಆತ್ಮವಿಶ್ವಾಸದ ಮೂಲಕ ಅಪೂರ್ವವಾದುದನ್ನು ಸಾಧಿಸಿ ಹೇಗೆ ಒಂದು ಬೃಹತ್ ರಾಷ್ಟ್ರವಾಗಿ ರೂಪುಗೊಳ್ಲಬಹುದೆಂಬ ಕಾಣ್ಕೆಯಿದೆ. ಹಾಗ್ ನೋಡಿದರೆ ಇದೊಂದು ಮುಂದುವರಿದಿರುವ ಕಥನವಷ್ಟೇ ಅಲ್ಲ, ಭಾರತವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ 2020ಕ್ಕೂ ಅದರಾಚೆಗೂ ಕರೆದೊಯ್ಯುವ ವೈಯಕ್ತಿಕ ಹಾಗೂ ಸಾಮೂಹಿಕ ಯಾತ್ರೆಯೂ ಹೌದು.

ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ೨೦೦೨ರಿಂದ ೨೦೦೭ರ ವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿದ್ದರು. ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದವರು. ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರದ್ಲ ಜನಿಸಿದ ಡಾ. ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತರು. ಭಾರತವನ್ನು ಬಾಹ್ಯಾಕಾಶ ಯಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದ ರೋಹಿಣಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಎಸ್‌ಎಲ್‌ವಿ-೩ ರಾಕೆಟ್ ಉಡಾವಣಾ ವಾಹನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸುವುದರಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದರು. ಭಾರತದ ಯುದ್ಧಾನುಕೂಲದ ಕ್ಷಿಪಣಿ ವ್ಯವಸ್ಥೆಗಳ ರಚನೆಯಲ್ಲೂ ಅವರದೇ ಪ್ರಧಾನ ಪಾತ್ರ, ಹಾಗೂ ೧೯೯೮ರ ಪರಮಾಣು ಸರಣಿ ಪರೀಕ್ಷೆಗಳಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ತಂತ್ರಜ್ಞಾನ ಮಾಹಿತಿ, ಭವಿಷ್ಯಗ್ರಹಣ ಹಾಗೂ ಅಂದಾಜು ಮಂಡಯ (ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ - ಟಿಐಎಫ್‌ಎಸಿ) ಅಧ್ಯಕ್ಷರಾಗಿ ಹಾಗೂ ಓರ್ವ ಗಣ್ಯ ವಿಜ್ಞಾನಿಯಾಗಿ ೫೦೦ ಮಂ ತಜ್ಞರ ಸಹಾಯದೊಂಗೆ ಅವರು ೨೦೨೦ರ ತಂತ್ರಜ್ಞಾನ ಕಾಣ್ಕೆಯನ್ನು ರೂಪಿಸಿದರು. ಇದು ಭಾರತವನ್ನು ಒಂದು ಮುಂದುವರಿದ ರಾಷ್ಟ್ರವಾಗಿ ರೂಪಿಸುವುದಕ್ಕೆ ಮಾರ್ಗೋಪಾಯಗಳನ್ನೂ ನೀಲಿನಕ್ಷೆಯನ್ನೂ ಹಾಕಿಕೊಟ್ಟಿತು. ಸಲಹೆ ಕೊಡುತ್ತ, ಜನರೊಡನೆ ಸಂಪರ್ಕ ಬೆಳೆಸುತ್ತ ಮತೀಯ ಹಾಗೂ ಸಾಮಾಜಿಕ ವೈಷಮ್ಯಗಳು ನಿರ್ಮಾಣವಾದಲ್ಲೆಲ್ಲ ಅವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತ ಕಲಾಂ ಅವರು ಇಂದು ಸಾಮಾಜಿಕ ಕ್ಷೇತ್ರಗಳಲ್ಲೂ ಜನ ಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಭಾರತವನ್ನು ೨೦೨೦ರ ವೇಳೆಗೆ ಮುಂದುವರಿದ ರಾಷ್ಟ್ರವಾಗಿ ರೂಪಿಸುವ ಕನಸನ್ನು ಅವರು ಎಡೆಬಿಡದೆ ಹಿಂಬಾಸಿದ್ದಾರೆ. ಇದಕ್ಕಾಗಿ ಅವರು ದೇಶಾದ್ಯಂತ ಸುತ್ತಿ ಕಮ್ಮಟಗಳಲ್ಲೂ ಸೆಮಿನಾರುಗಳಲ್ಲೂ ಭಾಗವಹಿಸಿ ತಜ್ಞರನ್ನೂ ಯುವ ಜನಾಂಗದವರನ್ನೂ ಹುರಿದುಂಬಿಸುತ್ತಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಐಐಟಿ ಮತ್ತು ಐಐಎಂಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
Rs. 195    Rs. 176
10%
ಪ್ರಜ್ವಲಿತ ದೀಪಗಳು - ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 150    Rs. 135
10%
ಮಹತ್ವದ ಮಾರ್ಗಗಳು : ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 160    Rs. 144
Best Sellers
ನರೇಂದ್ರ ಮೋದಿ ಯಾರೂ ತುಳಿಯದ ಹಾದಿ
ಪ್ರತಾಪ್ ಸಿಂಹ, Prathap Simha
Rs. 248/-   Rs. 275
ದಲಿತ ಸಂವೇದನೆ (ಅಂಬೇಡ್ಕರ್‌ವಾದಿ ಚಿಂತನೆಯ ಬರಹ)
ಅಪ್ಪಗೆರೆ ಸೋಮಶೇಖರ್, Appagere Somashekar
Rs. 135/-   Rs. 150
ವೀರ ಸಂಗೊಳ್ಳಿ ರಾಯಣ್ಣ (ವಿಶ್ವಮಾನ್ಯರು)
ಪ್ರದೀಪ್ ರೋಖಡೆ, Pradeep Rokhade
Rs. 27/-   Rs. 30
God A Creation of Man
Murthy Rao A N
Rs. 90/-   Rs. 100

Latest Books
ಫಾಲೋಯಿಂಗ್ ಫಿಶ್ : ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟ
ಸಮಂತ್ ಸುಬ್ರಮಣಿಯನ್, Samanth Subramanian
Rs. 198/-   Rs. 220
ಸಿ ಅಚ್ಯುತ ಮೆನನ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ನೈತಿಕತೆ ಸಮಗ್ರತೆ ಅಭಿಕ್ಷಮತೆ : KAS IAS Paper IV
ಪರಶುರಾಮ ಕಟ್ಟಿಮನಿ, Parashuram Kattimani
Rs. 214/-   Rs. 225
ಮರೆತ ಭಾರತ
ಕೇಶವರೆಡ್ಡಿ ಹಂದ್ರಾಳ, Keshava Reddy Handrala
Rs. 203/-   Rs. 225


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.