Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200   
10%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 1131678

ಇಲ್ಲಿ ಬರುವ ಮೂರು ಮಕ್ಕಳು ರೈಲಿಗೆ ತಮ್ಮನ್ನು ತೆರೆದುಕೊಳ್ಳುವುದು ಒಂದು ನಾಟಕೀಯವೂ ಕಷ್ಟದಾಯಕವೂ ಆದ ಪ್ರಸಂಗದಿಂದ. ಅವರ ಅಪ್ಪನನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ ಬಂಧಿಸಿ ಸೆರೆಮನೆಗೆ ಹಾಕುತ್ತದೆ. ಇದನ್ನು ಮಕ್ಕಳಿಗೆ ಹೇಳದಂತೆ ಗುಟ್ಟಾಗಿಟ್ಟು, ಗಂಡ ಬರುವ ತನಕ ಕುಟುಂಬವನ್ನು ಸಂಭಾಳಿಸುವ ಹೊಣೆ ಈ ಮಕ್ಕಳ ತಾಯಿಯ ಮೇಲೆ ಬೀಳುತ್ತದೆ. ಹೀಗಾಗಿ ಇದ್ದಕ್ಕಿದ್ದಂತೆ ಬಡತನಕ್ಕೆ ಇಳಿಯುವ ಕುಟುಂಬವು ಲಂಡನ್ ನಗರ ತೊರೆದು, ಒಂದು ಹಳ್ಳಿಗೆ ವಲಸೆ ಬರುತ್ತದೆ. ಹೊಲ ಕಾಡು ಹೊಳೆಗಳಿಂದ ಆವೃತವಾಗಿರುವ ಒಂದು ಹಳೆಯ ಮನೆಯಲ್ಲಿ ವಾಸ ಶುರುವಾಗುತ್ತದೆ. ಹೊಸ ಜಾಗಕ್ಕೆ ಬಂದ ಮಕ್ಕಳು ನಿಧಾನವಾಗಿ ತಮ್ಮ ಸುತ್ತ ತೆರೆದುಬಿದ್ದಿರುವ ನಿಸರ್ಗ ಮತ್ತು ಮನುಷ್ಯ ಪರಿಸರಕ್ಕೆ ಸಹಜವಾಗಿ ಮೆಲ್ಲಗೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಮನೆಯ ಬಳಿ ಹಾದುಹೋಗಿರುವ ರೈಲುಹಳಿ, ಅದರ ಮೇಲೆ ಓಡಾಡುವ ರೈಲು, ಸಮೀಪದಲ್ಲೇ ಇರುವ ನಿಲ್ದಾಣ ಅವರನ್ನು ಸೆಳೆಯುತ್ತದೆ. ಸ್ಟೇಶನ್‍ಮಾಸ್ತರ್, ಅದರ ಸಿಗ್ನಲ್‍ಮನ್, ಪೋರ್ಟರು, ಹೊಳೆಯಲ್ಲಿ ಮೀನು ಹಿಡಿಯುವ ಬೆಸ್ತರು ಅವರಿಗೆ ಪರಿಚಿತರಾಗುತ್ತಾರೆ. ಗೆಳೆಯರಾಗುತ್ತಾರೆ. ಹೊಸ ಪರಿಸರದಲ್ಲಿ ಮಕ್ಕಳು ತಮ್ಮ ಜೀವಂತಿಕೆ ಪ್ರಕಟಿಸುತ್ತ ಹೋಗುತ್ತವೆ. ಇಡೀ ಕಾದಂಬರಿ ಅವರು ಮಾಡುವ ಅನೇಕ ಬಗೆಯ ಸಾಹಸಗಳನ್ನ ಒಳಗೊಂಡಿದೆ. ಕಾದಂಬರಿಯ ಕೊನೆಗೆ ದಿನ ಅವರ ಅಪ್ಪ ಸೆರೆಮನೆಯಿಂದ ಬಿಡುಗಡೆಯಾಗಿ ರೈಲಿನ ಮೂಲಕ ಬಂದು ಇಳಿಯುತ್ತಾನೆ. ಕಾದಂಬರಿಯ ಮುಕ್ತಾಯದ ಸನ್ನಿವೇಶವೂ ವಿಶೇಷವಾಗಿದೆ. ಬಿಡುಗಡೆಯಾಗಿ ಬಂದ ತಂದೆಯನ್ನು ರೈಲ್ವೆನಿಲ್ದಾಣದಿಂದ ಕರೆದುಕೊಂಡು ಬರುವ ದೊಡ್ಡ ಮಗಳು (ಅವಳಿಗೆ ಮಾತ್ರ ಬಿಡುಗಡೆಯಾದ ಗುಟ್ಟು ಗೊತ್ತಿತ್ತು) ತನ್ನ ತಾಯಿಗೂ ತಮ್ಮತಂಗಿಯರಿಗೂ ಆಶ್ಚರ್ಯಪಡಿಸಬೇಕೆಂದು ಪೂರ್ವಸೂಚನೆಯಿಲ್ಲದೆ ಮನೆಯೊಳಗೆ ಪ್ರವೇಶಿಸುವುದರ ಮೂಲಕ ಕಾದಂಬರಿ ಮುಗಿಯುತ್ತದೆ. ನಂತರ ಮನೆಯೊಳಗೆ ಏನಾಯಿತು? ಅದನ್ನು ನಮ್ಮ ಊಹೆಗೆ ಬಿಡುತ್ತದೆ.

-ರಹಮತ್ ತರೀಕೆರೆ
(ಮುನ್ನುಡಿಯಿಂದ)

Best Sellers
ಲಿಂಗಾಯತ : ಹಿಂದೂ ಅಲ್ಲ, ವೀರಶೈವವೂ ಅಲ್ಲ
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 18/-
ದೇವದತ್ತ ಪಟ್ಟನಾಯಕ ಜಯ ಮಹಾಭಾರತದ ಸಚಿತ್ರ ಮರುಕಥನ
ದೇವದತ್ ಪಟ್ನಾಯಕ್, Devdutt Pattanaik
Rs. 618/-   Rs. 650
ಕಾಕನಕೋಟೆ (Hard Cover)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 225/-   Rs. 250
ವಿಸ್ಮಯಕರ ಪ್ರಶ್ನೋತ್ತರಗಳು ವಿಶ್ವಕೋಶ
ಸಪ್ನ, Sapna
Rs. 216/-   Rs. 240

Latest Books
Mittabail Yamunakka : A Tale of a Landlords Household
ಚೌಟ ಡಿ ಕೆ, Chowta D K
Rs. 450/-   Rs. 500
ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ
ಎಸ್ ಲಕ್ಷ್ಮಿನಾರಾಯಣ, S Lakshminarayana
Rs. 113/-   Rs. 125
ಯೋಗ ಆರೋಗ್ಯ : ಯೋಗದಿಂದ ಯೋಗ್ಯ ವಿದ್ಯಾರ್ಥಿ
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, Delampady
Rs. 225/-   Rs. 250
ಚೌಚೌ ಬಾತ್ : ಬಿಡಿ ಬರಹಗಳ ಇಡಿಯಾದ ಹೂ ಗುಚ್ಛ
ನಿರಂಜನ ವಾನಳ್ಳಿ, Niranjana Vanalli
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.