|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೨೦೦೨ರಲ್ಲಿ ತಮ್ಮ ಯುಗ-ಸಂಧ್ಯಾ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಸುಜನಾ ಅವರು ಆದರ್ಶ ಅಧ್ಯಾಪಕರಾಗಿ, ಸತ್ತ್ವಶಾಲೀ ಸೃಜನಶೀಲ ಕವಿಯಾಗಿ, ಸ್ವೋಪಜ್ಞ ಚಿಂತಕರೂ ವಿಮರ್ಶಕರೂ, ಯಶಸ್ವೀ ಅನುವಾದಕರೂ ಆಗಿ ವಿಶ್ವವಿದ್ಯಾನಿಲಯದ ವಲಯದಲ್ಲಿ ಹೆಸರು ಮಾಡಿದ್ದಂಥ ಅಪರೂಪದ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ತಮ್ಮ ದಕ್ಷತೆ - ಸಾಮರ್ಥ್ಯ ಬದ್ಧತೆಗಳನ್ನೂ ಮೆರೆದರು. ಕುವೆಂಪು, ಪು.ತಿ.ನ. ಅವರಂಥ ಮಹಾ ಕವಿಚೇತನಗಳು ಪ್ರಭಾವಸ್ಫೂರ್ತಿಗಳ ಹಿನ್ನೆಲೆಯಲ್ಲಿ ತಮ್ಮ ಕವಿ-ವ್ಯಕ್ತಿತ್ವವನ್ನು ರೂಪಿಸಿಕೊಂಡ ಸುಜನಾ ಅವರು ಸಾಹಿತ್ಯ ಕ್ಷೇತ್ರದ ಯಾವುದೇ ಗುಂಪಿನೊಂದಿಗೂ ಗುರುತಿಸಿಕೊಳ್ಳದೆ ಗುಂಪು ಕಟ್ಟದೆ, ತಮ್ಮದೇ ಹಾದಿಯಲ್ಲಿ ನಡೆದು ತಮ್ಮ ವಿಶಿಷ್ಟ ಸಾಧನೆಯನ್ನು ಮೆರೆದವರು. ಸ್ವೋಪಜ್ಞ ವಿಮರ್ಶಕರಾಗಿಯೂ ಪ್ರಾಚೀನ-ಅರ್ವಾಚೀನ ಸಾಹಿತ್ಯಗಳನ್ನು ಒರೆಗೆ ಹಚ್ಚಿದ ಹಿರಿಮೆ ಅವರದು. ನಿವೃತ್ತಿಯ ಅನಂತರವೂ, ತಮ್ಮ ಅನಾರೋಗ್ಯದ ನಡುವೆಯೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ತರುಣ ತಲೆಮಾರಿನ ಸಾಹಿತಿಗಳನ್ನು, ವಿಮರ್ಶಕರನ್ನು ಪ್ರೋತ್ಸಾಹಿಸುತ್ತ ಇದ್ದುದು ಆಶ್ಚರ್ಯವನ್ನುಂಟುಮಾಡುತ್ತಿತ್ತು. ಅಂಥ ವಿರಳ ಮನೋಧರ್ಮದ ಅಪೂರ್ವ ಚೇತನವೇ ಅವರಾಗಿದ್ದರು.
|
| |
|
ಲೇಖಕರ ಇತರ ಕೃತಿಗಳು
| |   ಮಹಾಕವಿ ಕುಮಾರವ್ಯಾಸ ವಿರಚಿತ .... | |
|
|
|
|
|
|
|
|