|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ.ಎಂ.ಎನ್. ಹೆಗ್ಡೆ (ಮಹಾಬಲಗಿರಿ ಎನ್. ಹೆಗ್ಡೆ) ಯವರ `ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ` ಕೃತಿಯು ಸಾಹಿತ್ಯ ಮೀಮಾಂಸೆ ಕುರಿತ ಅಪೂರ್ವ ಕೃತಿ. ೧೯೫೩ರಲ್ಲಿ ತೀ.ನಂ. ಶ್ರೀಕಂಠಯ್ಯನವರ ಭಾರತೀಯ ಕಾವ್ಯ ಮೀಮಾಂಸೆ ಪ್ರಕಟವಾದಾಗ ಕುವೆಂಪು ಆ ಕೃತಿಯನ್ನು ಭಾರತೀಯ ಕಾವ್ಯಮೀಮಾಂಸೆಯ `ಆಚಾರ್ಯ ಕೃತಿ` ಎಂದು ಕೀರ್ತಿಸಿದರು. ಪ್ರೊ. ಹೆಗ್ಡೆಯವರ `ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ` ಯನ್ನು ನಾನು `ಸಾಹಿತ್ಯ ಮೀಮಾಂಸೆಯ ಕನ್ನಡದ ಕಳಶ ಕೃತಿ` ಎಂದು ಕರೆಯುವುದಕ್ಕೆ ಇಷ್ಟಪಡುತ್ತೇನೆ.
ಈ ಸ್ವರೂಪದ ಹೆಗ್ಡೆಯವರ ಕೃತಿ ಕನ್ನಡದಲ್ಲಿ ಮಾತ್ರವಲ್ಲ ನಾನು ಬಲ್ಲಂತೆ ಈವರೆಗೆ ಯಾವ ಭಾಷೆಯಲ್ಲಿಯೂ ಬಂದಿಲ್ಲ. ಆ ಕಾರಣಕ್ಕಾಗಿಯೂ ಇದೊಂದು ವಿಶೇಷ ಕೃತಿ, ಅನನ್ಯ ಕೃತಿ.
ಡಾ. ಹೆಗ್ಡೆಯವರ ಈ ಕೃತಿ ಕನ್ನಡದಲ್ಲಿ ಸಾಹಿತ್ಯ ಮೀಮಾಂಸೆಯ ಜ್ಞಾನಕ್ಷೇತ್ರದಲ್ಲಿ ಪ್ರಕಟವಾಗುತ್ತಿರುವಂಥ ಅಪೂರ್ವ ಕೃತಿ. ಡಾ. ಗಿರಿ ಹೆಗ್ಡೆಯವರ ಅಂತರ್ಶಿಸ್ತೀಯ ಅಧ್ಯಯನದ ಆಳ, ವೈಶಾಲ್ಯ ಯಾರನ್ನೂ ಬೆರಗುಗೊಳಿಸುವಂತಿದೆ.
ಈ ಕೃತಿ ಕನ್ನಡದ ಹೆಮ್ಮೆ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬೆಳಗುವ ಕೃತಿಗಳ ಪಂಕ್ತಿಯಲ್ಲಿ ನಿಲ್ಲುವಂಥದು.
- ಜಿ. ಎಚ್. ನಾಯಕ ಅವರ ಮುನ್ನುಡಿಯಿಂದ
|
| |
|
|
|
|
|
|
|
|
|