Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9788194446408
ಕೋಡ್ : 1121640

“ರಾಜ್ಕುಮಾರ್ ಬಹಳ ಸಿಂಪಲ್ ಬಿಡ್ರೀ.. ಬಿಳೀ ಪಂಚೆ, ಷರಟು ಮಾತ್ರ ಧರಿಸೋರು". ರಾಜ್ಕುಮಾರ್ ಅವರ ಬಗ್ಗೆ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆ, ಷರಟು ಧರಿಸುತ್ತಾರೆ. ಪ್ಯಾಂಟು ಏಕೆ ಹಾಕಲಿಲ್ಲ, ಬರೀ ಪಂಚೆ, ಷರಟು ಹಾಕಿದರೆ ಮಾತ್ರ ಸಿಂಪಲ್ಲಾ? ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾ? ಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೆ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ, ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್‌ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜ್ಕುಮಾರ್ ಸಿಂಪಲ್‌ನ ಸೂತ್ರಧಾರ ಮತ್ಯಾರು ಅಲ್ಲ, ಕೊನೇತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು.
ನಾನಾಗಲಿ, ನೀವಾಗಲಿ, ಯಾವ ನಟರೇ ಆಗಲಿ, ವೃತ್ತಿ ಜೀವನಕ್ಕೆ ಕಾಲಿಡುವ ಆರಂಭದಲ್ಲಿ ಅವರೊಳಗಿರುವ ಮುಗ್ಧತೆ, ಆ ವ್ಯಕ್ತಿತ್ವ ಆಮೇಲಾಮೇಲೆ ಅವರಲ್ಲಿ ಇರೋದಿಲ್ಲ. ಅದರಲ್ಲೂ, ಹೆಸರು, ಹಣ ದಕ್ಕಿದಾಗಲಂತೂ ತನ್ನೊಳಗೆ ಮೂಲ ವಿಗ್ರಹದ ಥರ ಇರೋ ಮುಗ್ಧತೆ ಕಾಣೆಯಾಗಿಬಿಡುತ್ತದೆ. ರಾಜ್ಕುಮಾರರು ಇದಕ್ಕೆ ಅಪವಾದ. ಸಿನಿಮಾದಲ್ಲಿ ಪಾರ್ಟ್ ಕೇಳಿಕೊಂಡು ಅಪ್ಪನ ಜೊತೆ ಮದರಾಸಿಗೆ ಹೋದಾಗ ಇದ್ದ ಮುಗ್ಧತೆ, ರಾಜ್ಕುಮಾರನಾಗಿ, ಹೆಸರು, ಹಣ, ಜನಪ್ರಿಯತೆ ಎಲ್ಲ ಗಳಿಸಿದ ಮೇಲೂ ಆಂತರ್ಯದಲ್ಲಿ ಹಾಗೇ ಬದುಕಿತ್ತು. ನಮಗೆಲ್ಲಾ ಸಿಂಪಲ್ ಆಗಿ ಕಾಣ್ತಾ ಇದ್ದದ್ದು ರಾಜ್ಕುಮಾರರಾದರೂ ಅದಕ್ಕೆ ಕಾರಣೀಭೂತರು ಈ ಮುತ್ತುರಾಜ್. ಸಿಂಪಲ್‌ಗೆ ಸ್ಯಾಂಪಲ್ ಆಗಿರೋ ಅವರನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದೇವೆ..

ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ. ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಊರಲ್ಲೇ. ಡಿಗ್ರಿ ದೇವನಹಳ್ಳಿ, ಸ್ನಾತಕೋತ್ತರ ಪದವಿ ಮೈಸೂರು ವಿವಿ, ಪತ್ರಿಕೋದ್ಯಮ ಪದವಿ ಬೆಂಗಳೂರಿನ ಭಾರತೀಯ ವಿದ್ಯಾಭವನ. ಮೂಲತಃ ಸಂಗೀತ ಕುಟುಂಬ. ತಂದೆ ಹಾಗೂ ಚಿಕ್ಕಪ್ಪ ಸತ್ಯನಾರಾಯಣರಾವ್ ಕಟ್ಟೆ ಮೃದಂಗ ಕಲಾವಿದರು. ಪೂರ್ವಸೂರಿಗಳು - ತಾತ ಕನ್ನಡ ಪಂಡಿತರಾದ ಕಟ್ಟೆ ಕೃಷ್ಣರಾಯರು, ಹಿಂದೂಸ್ತಾನಿ ಗಾರುಡಿಗ ಗವಾಯಿ ರಾಮು (ಪಂಡಿತ್ ರಾಮರಾವ್ ನಾಯಕ್). ಇವರ ಸಂಸ್ಕಾರದ ಫಲ ಸಂಗೀತದಲ್ಲಿ ಅಭಿರುಚಿ ಹುಟ್ಟಿ, ಪುಟ್ಟವಯಸ್ಸಿನಲ್ಲೇ ತಂದೆ ರೂಪಿಸಿದ್ದ “ಮಂಜುಳಾ ಸಹೋದರಿಯರು” ಅನ್ನೋ ಸುಗಮ ಸಂಗೀತ ತಂಡದಲ್ಲಿ ಕಾಂಗೋ, ತಬಲವಾದಕರಾಗಿ ನೂರಾರು ಕಾರ್ಯಕ್ರಮ ಕೊಟ್ಟು, ಆಮೇಲೆ ಆನೂರು ಅನಂತಕೃಷ್ಣ ಶರ್ಮ, ರವೀಂದ್ರ ಯಾವಗಲ್, ಉದಯ್‌ರಾಜಕರ್ಪೂರ್ ಶಿಷ್ಯತ್ವ. ಪತ್ರಿಕೋದ್ಯಮ ವೃತ್ತಿಯಾದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಪ್ರವೃತ್ತಿ. ಕಳೆದ ೧೬ ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಈಗ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿದ್ದಾರೆ. ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು ಬರಹಕ್ಕೆ ೨೦೦೮ರ “ಚರಕ ಪ್ರಶಸ್ತಿ” ದೊರೆತಿದೆ. “ಥ್ರಿಲ್ಲಿಂಗ್ ವೀರಪ್ಪನ್”, “ಆನೆ ಡಾಕ್ಟ್ರ ಆತ್ಮಕಥೆ” ಚೊಚ್ಚಲ ಕೃತಿಗಳು. ನೀರಿಗೆ ಸಂಬಂಧಿಸಿದ ‘ಆಪೋಶನ’ ಇವರ ಮೂರನೇ ಕೃತಿ. ರಾಜ್‌ಕುಮಾರ್ ಮತ್ತಷ್ಟು ಮುಖಗಳು ಇವರ ನಾಲ್ಕನೇ

ಲೇಖಕರ ಇತರ ಕೃತಿಗಳು
10%
ಆನೆ ಡಾಕ್ಟ್ರ ಆತ್ಮಕಥೆ ....
ಕಟ್ಟೆ ಗುರುರಾಜ್, Katte Gururaj
Rs. 120    Rs. 108
10%
Thrilling ವೀರಪ್ಪನ್ : ....
ಕಟ್ಟೆ ಗುರುರಾಜ್, Katte Gururaj
Rs. 100    Rs. 90
Rs. 100    Rs. 90
Best Sellers
ಹೆಜ್ಜೆ ಗುರುತು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಪ್ರವಾಸಿ ಕಂಡ ಇಂಡಿಯಾ ಭಾಗ - 3
ನಾಗೇಗೌಡ ಎಚ್ ಎಲ್, Nagegowda H L
Rs. 293/-   Rs. 325
ನಕ್ಷತ್ರ ಲೋಕದಲ್ಲಿ ನಚಿಕೇತ
ಕಿರಣ್ ಪ್ರಸಾದ್ ಆರ್, Kiran Prasad R
Rs. 23/-   Rs. 25
ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ
ಪಟ್ಟಾಭಿರಾಮ ಸೋಮಯಾಜಿ ಎಚ್, Pattabhi Rama Somayaaji H
Rs. 113/-   Rs. 125

Latest Books
ಕಥೆಗಳಲ್ಲಿ ಕಂಡ ಗಾಂಧಿ : ವ್ಯಕ್ತಿ ವ್ಯಕ್ತಿತ್ವ
ನಾಗರಾಜರಾವ್ ಎಂ ವಿ, Nagarajarao M v
Rs. 99/-   Rs. 110
ಭಾವತೀರಯಾನ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಚೆಲುವ ತರು
ಧರ್ಮಪಾಲ್
Rs. 288/-   Rs. 320
ಪೊಲೀಸ : ಹುದ್ದೆ ನೇಮಕಾತಿ ಪರೀಕ್ಷಾ ಕೈಪಿಡಿ
ಶ್ರೀ ಸತೀಶಕುಮಾರ ವಾಯ್, Sri Satishkumar Vai
Rs. 485/-


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.