|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಂ.ಶ್ರೀ. ಮುಗಳಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯವತಿಂದ ಪುರಸ್ಕೃತರಾದ ಎರಡನೆಯ ಕನ್ನಡಿಗರು(೧೯೫೬). ತಮ್ಮ ಕನ್ನಡ ಸಾಹಿತ್ಯ ಚರಿತ್ರೆ ಗಾಗಿ ಪ್ರಶಸ್ತಿಯನ್ನು ಗಳಿಸಿದ ಅವರು, ಈ ಕಾರಣಕ್ಕಾಗಿ ಅದೆಷ್ಟು ಪ್ರಸಿದ್ಧರಾಗಿಬಿಟ್ಟರೆಂದರೆ, ಇತರ ಕ್ಷೇತ್ರಗಳಲ್ಲಿನ ಅವರ ಸಾಧನೆ ಗೌಣವಾಗಿ ಪರಿಣಮಿಸಿಬಿಟ್ಟಿತು. ವೈಜ್ಞಾನಿಕವಾದ, ವ್ಯವಸ್ಥಿತವಾದ, ಆಧಾರಪೂರ್ವಕವಾದ ಹಾಗೂ ವಸ್ತು ನಿಷ್ಟವಾದ ಮೊಟ್ಟಮೊದಲ ಸಾಹಿತ್ಯ ಚರಿತ್ರೆಯನ್ನು ಕನ್ನಡಕ್ಕೆ ನೀಡಿದ್ದು ಅವರ ಜೀವಮಾನದ ಮಹತ್ಸಾಧನೆಯೇ ಆಗಿದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ ಅವರು ನೀಡಿರುವ ಕಾಣಿಕೆಯೂ ವಿಶಿಷ್ಟವಾದುದೇ ಆಗಿದೆ. ಮುಗಳಿಯವರ ಶಿಷ್ಯರೂ, ಮುಂಬು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ವಿಭಾಗದ ಮುಖ್ಯಸ್ಥರೂ ಆದ ಡಾ. ತಾಳ್ತಜೆ ವಂಸತಕುಮಾರ ಈ ಪುಸ್ತಕದ ಲೇಖಕರು.
|
| |
|
|
|
|
|
|
|
|
|