|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆರ್ಯ-ದ್ರಾವಿಡ ಎನ್ನುವ ಪದಗಳಿಗೆ ಬ್ರಾಹ್ಮಣರು ಹಾಗೂ ಶೂದ್ರರು ಎಂಬ ಅರ್ಥವನ್ನು ನೀಡಿ, ಬ್ರಾಹ್ಮಣ, ಬ್ರಾಹ್ಮಣತ್ವ ಹಾಗೂ ಹಿಂದು ಧರ್ಮ ಸಂಪೂರ್ಣ ನಾಶವಾಗುವವರೆಗೂ ದ್ರಾವಿಡರಿಗೆ ಏಳಿಗೆಯಿಲ್ಲ ಎನ್ನುತ್ತಾ, ಪರ್ಯಾಯ ಧರ್ಮಕ್ಕಾಗಿ ಇಸ್ಲಾಂ, ಕ್ರೈಸ್ತ ಹಾಗು ಬೌದ್ಧ ಧರ್ಮಗಳಲ್ಲಿ ತಡಕಾಡಿ, ಕೊನೆಗೆ ತಿರುವಳ್ಳವರ್ ಅವರ ತಿರುಕ್ಕುರಳ ದ್ರಾವಿಡರ ಪ್ರಮಾಣಗ್ರಂಥ ಎಂದು ‘ದ್ರಾವಿಡಸ್ತಾನ್‘ ರೂಪಿಸಲು ಹೋಗಿ ತಮಿಳುನಾಡುವಿಗೆ ಜನ್ಮವಿತ್ತ ಕ್ರಾಂತಿಕಾರಿ ಹಾಗೂ ವಿವಾದಾಸ್ಪದ ವ್ಯಕ್ತಿ. ‘ಪೆರಿಯಾರ್‘ ಎಂಬ ಅಭಿದಾನವನ್ನು ಅಭಿಮಾನಿಗಳಿಂದ ಪಡೆದ ಈರೋಡ್ ವೆಂಕಟರಾಮಸ್ವಾಮಿ ನಾಯಕರ್! ದ್ರಾವಿಡತ್ವಕ್ಕಾಗಿ ಗಾಂಧೀಜಿ, ರಾಜಾಜಿ, ಅಂಬೇಡ್ಕರ್ ಮುಂತಾದವರಿಂದ ದೂರವಾಗಿ, ದ್ರಾವಿಡರ್ ಕಳಗಂ ಕಟ್ಟಿ, 40 ವರ್ಷಗಳಿಗೂ ಕಿರಿಯ ಯುವತಿಯನ್ನು ಮದುವೆಯಾಗಿ, ಸ್ವಜನರಿಂದಲೇ ಟೀಕೆಗೆ ತುತ್ತಾಗಿ ಕೊನೆಗೆ ದ್ರಾವಿಡ ಕಳಗಂ ಸಿಡಿದು ‘ದ್ರಾವಿಡ ಮುನ್ನೇಟ್ರ ಕಳಗಂ‘ ಎನ್ನುವ ಪಕ್ಷ ಉದಯವಾಗಿ, ಅದರ ನಾಯಕರಾದ ಸಿ.ಎನ್. ಅಣ್ಣಾದೊರೈ ಅವರು ಪೆರಿಯಾರ್ ಕಷ್ಟಪಟ್ಟು ನಡೆಸಿದ ಕೃಷಿಯ ಪರಿಪೂರ್ಣ ಲಾಭವನ್ನು ಪಡೆಯುವಂತಾದದ್ದು ದ್ರಾವಿಡ ಚಳವಳಿಯ ಒಂದು ದುರಂತ!
|
| |
|
|
|
|
|
|
|
|
|