|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪಾಬ್ಲೊ ನೆರೂಡ (1904-1973) ಅವರ ಮೂಲ ಹೆಸರು ರಿಕಾರ್ದೊ ನೆಫ್ತಾಲಿ ರೀಸ್ ಬಾಸಾಲ್ಟೊ. ಈತ ಚಿಲಿ ದೇಶದ ಕವಿ, ಬರಹಗಾರ, ಮುತ್ಸದ್ದಿ ಹಾಗೂ ರಾಜಕಾರಣಿ. ಪಾಬ್ಲೊ ನೆರೂಡ ಎನ್ನುವುದು ಅವರ ಕಾವ್ಯನಾಮ. ಸ್ಫೂರ್ತಿ ಜೆಕ್ ಕವಿ ಜಾನ್ ನೆರೂಡ ಅವರ ಹೆಸರು! ಕಾರಣ ನೆರೂಡ ಅವರ ತಂದೆ ಜೋಸ್ ಡೆಲ್ ಕಾರ್ಮೆನ್ ರೀಸ್ ಮೋರಲ್ಸ್ರವರಿಗೆ ಮಗನು ಕಾವ್ಯ, ನಾಟಕ ಮುಂತಾದ ಬರಹಗಳಲ್ಲಿ ತೊಡಗುವುದು ಇಷ್ಟವಿರಲಿಲ್ಲ. ಹಾಗಾಗಿ ನೆರೂಡ ಕಾವ್ಯನಾಮವನ್ನಿಟ್ಟುಕೊಂಡು ತನ್ನ ಸಾಹಿತ್ಯ ಬದುಕನ್ನು ಆರಂಭಿಸುತ್ತಾನೆ.
ಪಾಬ್ಲೊ ನೆರೂಡ ಬರ್ಮ, ಅರ್ಜೆಂಟೀನ, ಸ್ಪೇಯ್ನ್, ಮೆಕ್ಸಿಕೊ ಮುಂತಾದ ದೇಶಗಳಲ್ಲಿ ಮುತ್ಸದ್ದಿಯಾಗಿ (ಡಿಪ್ಲೋಮ್ಯಾಟ್) ಕೆಲಸ ಮಾಡಿ ತನ್ನ ಅನುಭವಗಳನ್ನು ಹೆಚ್ಚಿಸಿಕೊಂಡನು. ಒಂದು ಹಂತದಲ್ಲಿ ನೆರೂಡ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಮಾರುಹೋದನು. ಕೊಲಂಬಿಯಾದ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ನೆರೂಡನನ್ನು 20ನೇ ಶತಮಾನದ ಮಹಾನ್ ಕವಿ ಎನ್ನುತ್ತಾನೆ. ಹೆರಾಲ್ಡ್, ಪಾಶ್ಚಾತ್ಯ ಕಾವ್ಯವನ್ನು ರೂಪಿಸಿದ 26 ಜನರಲ್ಲಿ ನೆರೂಡ ಸಹ ಒಬ್ಬನು ಎನ್ನುತ್ತಾನೆ. 1971ರಲ್ಲಿ ನೆರೂಡ ಅವರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ದೊರೆಯುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ನಿಂದ ನೆರೂಡ ಮರಣಿಸಿದಾಗ ಅವನ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಜನರು ಭಾಗವಹಿಸಿದ್ದು ನೆರೂಡನ ಜನಪ್ರೀತಿಯ ದ್ಯೋತಕವಾಗಿದೆ.
|
ಶ್ರೀ ಎಂ ಜೆ ರಾಜೀವ ಗೌಡರು ಚಿಕ್ಕಬಳ್ಳಾಪುರದ ಮೇಲೂರಿನಲ್ಲಿ ಅಧ್ಯಾಪಕರಾಗಿದ್ದಾರೆ. ಫೋಟೋಗ್ರಫಿ, ಚಾರಣ, ಗಣಿತದ ಬಗೆಗಿನ ಶಿಕ್ಷಣಗಳಲ್ಲಿ ಆಸಕ್ತರು. ಯಾರೂ ಬಯಸದ ಊರಿಗೆ ಕೇಳಿ ವರ್ಗ ಮಾಡಿಸಿಕೊಂಡು ಅಲ್ಲಿ ಕಾಡು ಬೆಳೆಸಲು ಶ್ರಮಿಸಿದ ಪರಿಸರ ಪ್ರೇಮಿ. ಇವರ ಕೆಲವು ಕಥೆಗಳು ನಾಡಿನ ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ. ಗಣಿತ ಮಾದರಿ ತಯಾರಿಕೆ, ಛಾಯಾಚಿತ್ರ ಪ್ರದರ್ಶನ ಇವರ ಹವ್ಯಾಸ
|
|
| |
|
|
|
|
|
|
|
|