|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಡನಾಡಿಯ ನೆನಪಿನಂಗಳದಲ್ಲಿರುವ ಹತ್ತು ಹಲವು ಘಟನೆಗಳನ್ನು, ವ್ಯಕ್ತಿ ಚಿತ್ರಗಳನ್ನು, ಸಂಧಿಗ್ರತೆಗಳನ್ನು ರೋಚಕ ತಿರುವುಗಳನ್ನು, ಮನೋಸಮಾಧಾನ ನೀಡಿದ ತೃಪ್ತಿಯನ್ನು ಪದಗಳಲ್ಲಿ ಹೆಣೆದು ಪುಸ್ತಕವಾಗಿಸಿ ತಮ್ಮ ಕೈಗೆ ನೀಡುವ ಪ್ರಾಮಾಣಿಕ ಪ್ರಯತ್ನವಿದು. ನಾವು ಸಾಗಿಬಂದ ದಾರಿಯ ನೋಟ ಕೆಲವಾದರೂ ಸೇವಾನಿರತ ಸ್ನೇಹಿತರಿಗೆ ಸಹಾಯಕವಾಗುವುದಾದರೆ, ಈ ಪ್ರಯತ್ನ ಸಾರ್ಥಕವೆಂದು ನಂಬುತ್ತೇವೆ.
ನಾವು, ಏನೇನೋ ಆಗಬೇಕೆಂದುಕೊಂಡಿದ್ದೆವು. ಆದರೆ ಅಂತಃಕರಣದ ಸೆಲೆಯೊಂದು ನಮ್ಮ ಬದುಕಿಗೆ ತಿರುವು ನೀಡಲಿದೆ ಎಂಬುದನ್ನು ಊಹಿಸಿಕೊಂಡೂ ಇರಲಿಲ್ಲ. ಯಾವ ತರಬೇತಿಯೂ ಇಲ್ಲದ, ಪ್ರಾಥಮಿಕ ಮಾಹಿತಿಯೂ ಇಲ್ಲದ ಕ್ಷೇತ್ರವೊಂದರಲ್ಲಿ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುತ್ತಾ, ಅದರಿಂದಲೇ ಕಲಿಯುತ್ತಾ, ಸೇವೆ ಹಾಗೂ ಹೋರಾಟವನ್ನು ಬದುಕಿನೊಡನೆ ಮೇಲೈಸಿ, ಇಪ್ಪತ್ತೊಂಬತ್ತು ವರ್ಷಗಳನ್ನು ಕಳೆದದ್ದು ಒಮ್ಮೊಮ್ಮೆ ನಮಗೂ ಸೋಜಿಗವಾಗಿ ಕಾಣುತ್ತದೆ! ಆರಂಭದಲ್ಲಿ ಅದು ನಮ್ಮ ಬದುಕಿನ ಆಯ್ಕೆಯಾಗಿರಲಿಲ್ಲವೆಂಬುದು ನಿಜವಾದರೂ, ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡ ಸೇವಾಕ್ಷೇತ್ರದ ಬಗ್ಗೆ ಅದಮ್ಯ ಪ್ರೀತಿ ಹಾಗೂ ಗೌರವವಿರುವ ನಾವು ಕಂಡ ಸೂಕ್ಷ್ಮಸತ್ಯಗಳನ್ನು ಓದುಗರ ಮುಂದಿಡುತ್ತಿದ್ದೇವೆ.
|
| |
|
|
|
|
|
|
|
|