Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 70   
10%
 
 
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 62
ಪುಸ್ತಕದ ಗಾತ್ರ : 1/8 Demy Size
ISBN : 9789389308129
ಕೋಡ್ : 003452

ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವೀಸ್‍ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆ. ಎಂಥ ಪ್ರತಿಭಾವಂತನಿಗೂ ಅಂತಸ್ತು - ಜಾತಿಯ ಹೊಡೆತಗಳು ನಮ್ಮ ಸಮಾಜದಲ್ಲಿ ಬಲವಾಗಿ ಬೀಳುತ್ತವೆ ಎಂಬುದಕ್ಕೆ ಈ ಕಥನ ಸಾಕ್ಷಿ. ಎಂಥ ಸಂದರ್ಭದಲ್ಲೂ ಧೃತಿಗೆಡದ ಕಥಾನಾಯಕ ಧರ್ಮಪಾಲನಿಗೆ ದಿನಗಳೆದಂತೆ ತಾನು ಕಛೇರಿಯಲ್ಲಿ "ಸಾಹೇಬ"ನೆಂಬ ನೆಪಮಾತ್ರದ ಅಧಿಕಾರಿಯಾಗಿದ್ದು ಎಲ್ಲವೂ ಇತರರಿಂದಲೇ ನಿರ್ದೇಶಿಸಲ್ಪಡುತ್ತದೆಂಬ ಸತ್ಯ ಅರಿವಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾಯಿಯೊಂದಿಗೆ ಆಹಾರಕ್ಕಾಗಿ ಅಲೆದಾಡುತ್ತಾ "ಕಾಪ್ಪಾಗೆ ಅನ್ನ, ಕಾಪ್ಪಾಗೆ ಅನ್ನ" ಎಂದು ಬೊಬ್ಬಿಡುತ್ತ ಕಳೆದ ದಿನಗಳನ್ನು ಸ್ಮರಿಸುತ್ತ, ಇಂದಿನ ಐಷಾರಾಮಿ ದಿನಗಳಿಗೆ ತಾಳೆ ಹಾಕುತ್ತ ಅಸಮಾಧಾನಗೊಂಡು ತನ್ನ ಅಸಹಾಯಕತೆಗಾಗಿ ಮರುಗುವ ಒಂದು ಹೃದಯಸ್ಪರ್ಶಿ ಚಿತ್ರಣ. ವ್ಯವಸ್ಥೆ ಬದಲಿಸಲು ಒಂದು ಕುರ್ಚಿ ಸಾಲದು, ನೂರು ಸಿಂಹಾಸನಗಳೇ ಬೇಕೆಂದು ಸಾರುವ ಕಥನ.


ಕೃತಿಯ ಲೇಖಕ ಶ್ರೀ ಜಯಮೋಹನ್ ತಮಿಳು ಹಾಗೂ ಮಲಯಾಳಂನ ಪ್ರಸಿದ್ಧ ಲೇಖಕರು. "ರಬ್ಬರ್" ಇವರ ಮೊದಲ ಕಾದಂಬರಿ. ಏಳು ಸಂಪುಟಗಳಲ್ಲಿರುವ "ಇಂತ್ಯನ್ ತತ್ವಚಿಂತ" ಹಾಗೂ ಮಹಾತ್ಮ ಗಾಂಧಿ ಕುರಿತಾದ ಸಮಗ್ರ ಅಧ್ಯಯನ "ಇನ್ನತ್ತೆ ಗಾಂಧಿ" ಪ್ರಸಿದ್ಧ ಕೃತಿಗಳು. 30 ಸಾವಿರಕ್ಕೂ ಹೆಚ್ಚು ಓದುಗರಿರುವ ನೆಟ್ ಮಾಸಿಕವೊಂದಕ್ಕೆ ನಿರಂತರ ಬರವಣಿಗೆ. ಚಲನಚಿತ್ರಗಳಿಗೂ ಚಿತ್ರಕಥೆ ಬರೆದಿದ್ದಾರೆ. ಕಥಾ ಅವಾರ್ಡ್, ಸಂಸ್ಕøತಿ ಸಮ್ಮಾನ್, ಕನ್ನಡ ಇಲಕ್ಕಿಯ ತೋಟ್ಟಂ ಅವಾರ್ಡ್ ಇವರಿಗೆ ಲಭಿಸಿದ ಪ್ರಶಸ್ತಿಗಳು.


ಕೃತಿಯ ಅನುವಾದಕ ಕೆ. ಪ್ರಭಾಕರನ್ ಕೆಪಿಟಿಸಿಎಲ್‍ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತರು. ಮಲಯಾಳಂ ಮೂಲದ ಕನ್ನಡಿಗರೇ ಆದ ಇವರು ಶಿವಮೊಗ್ಗದಲ್ಲಿ ನೆಲೆಸಿದ್ದು "ಸಮುದಾಯ ಕರ್ನಾಟಕ" ಸಂಘಟನೆಯಲ್ಲಿ 25 ವರ್ಷಗಳಿಂದಲೂ ಸಕ್ರಿಯರಾಗಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಮಾಜಶಾಸ್ತ್ರದ ಸ್ನಾತಕೋತ್ತರ ಪದವೀಧರರು. ಮಲಯಾಳಂನಿಂದ ಕನ್ನಡಕ್ಕೆ ಹಲವು ಪುಸ್ತಕಗಳ ಅನುವಾದ. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರಕ್ಕಾಗಿ ಹಲವು ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ

Best Sellers
ಸಂಪೂರ್ಣ ರಾಮಾಯಣ
ಅನಂತರಾಮ ರಾವ್ ಕೆ, Anantharama Rao K
Rs. 456/-   Rs. 480
ಶಾಲ ಪ್ರಬಂಧಗಳು - Essay Writting
ಸುಮಿತ್ರ ಪಿ ಎಚ್, Sumitra P H
Rs. 81/-   Rs. 90
ಐ ಬಿ ಎಚ್ ಇಂಗ್ಲಿಷ್ ಕನ್ನಡ ನಿಘಂಟು (Hard Cover)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 250/-
ಭಾರತ ಸಂವಿಧಾನ (1900 ವಸ್ತು ನಿಷ್ಠ ಪ್ರಶ್ನೆಗಳು) (Indian Constitution)
ಮೇರುನಂದನ್ ಕೆ ಬಿ, Merunandhan K B
Rs. 171/-   Rs. 190

Latest Books
ಚೆಕ್ ಪೋಸ್ಟ್ (ಕಾದಂಬರಿ)
ರಾಜು ಗಡ್ಡಿ, Raju Gaddi
Rs. 135/-   Rs. 150
ನೀನೇ ಉಸಿರು ನನ್ನೊಲವೆ
ಸಂತೋ‍‍ಷ್ ಬಾಗಿಲಗದ್ದೆ, Santosh Bagilagadde
Rs. 68/-   Rs. 75
ಮೈಸೂರೆಂಬ ಪ್ರವಾಸಿ ಸ್ವರ್ಗ
ಅಂಶಿ ಪ್ರಸನ್ನ ಕುಮಾರ್, Amshi Prasanna Kumar
Rs. 225/-   Rs. 250
ಸಂಶೋಧನ ಆಯಾಮಗಳು
ಡಾ. ಮಲ್ಲಯ್ಯ ಸಂಡೂರು, Dr. Mallaiah Sanduru
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.