|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನೂರ್ ಇನಾಯತ್ ಖಾನ್’ ಪತ್ರಕರ್ತ, ಲೇಖಕ ಚಂದ್ರಶೇಖರ್ ಮಂಡೆಕೋಲು ಅವರ ಕೃತಿ. ಎರಡನೆ ಮಹಾಯುದ್ಧದಲ್ಲಿ ಇಂಗ್ಲೆಂಡ್ ನಗರವನ್ನು ವಶಪಡಿಸಿಕೊಂಡಾಗ ಹಿಟ್ಲರ್ ನ ನಾಜಿ ಪಡೆಗಳ ವಿರುದ್ಧ ಹೋರಾಡಿದ ಗೂಢಚಾರಿಣಿ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಬದುಕಿನ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ ಈ ಕೃತಿಯು ಏಕಕಾಲಕ್ಕೆ ಕಲೆ, ತತ್ವಶಾಸ್ತ್ರ, ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ ಎನ್ನುತ್ತಾರೆ ಹಿರಿಯ ಲೇಖಕ, ಚಿಂತಕ ರಹಮತ್ ತರೀಕೆರೆ.
ಗಂಡು ಹೆಣ್ಣಿನ ಪ್ರೇಮ, ವ್ಯಕ್ತಿಗಳ ಅನುಭಾವದ ಸಾಧನೆ ಹಾಗೂ ಸಂಗೀತದ ಅಭಿರುಚಿಗಳನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಹಾಗೂ ಕಲಾತ್ಮಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಈ ಕೃತಿ ಸಾಂಸ್ಕೃತಿಕ ಪಠ್ಯವೂ ಆಗಿದೆ. ರಾಜ ಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ, ಮಹತ್ವದವರೂ ಮಹಿಳೆಯರ ಮೇಲೆ ಕಟ್ಟುತ್ತಿರುವ ಈ ಚರಿತ್ರೆಯ ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದು ಕಣ್ಣೋಟದಲ್ಲಿ ನೋಡಲು ಪ್ರೇರೇಪಿಸುತ್ತದೆ.
|
| |
|
|
|
|
|
|
|
|