Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನೆನಪೇ ಸಂಗೀತ : ವಿದ್ಯಾಭೂಷಣರ ಜೀವನ ಕಥನ
ಲೇಖಕರು: ವಿದ್ಯಾಭೂಷಣ, Vidyabhooshana

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 180    
10%
Rs. 162/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಉದ್ಗೀಥ ಪ್ರಕಾಶನ, Udgeetha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 1117783

ತಮ್ಮ ಸುಮಧುರ ಗಾಯನದಿಂದ ನಾಡಿನ ಮನ ಗೆದ್ದವರು ವಿದ್ಯಾಭೂಷಣರು. ದಾಸರ ಪದಗಳ ಗಾಯನಕ್ಕೆ ತಮ್ಮದೇ ಅನನ್ಯ ಕೊಡುಗೆ ನೀಡಿದ ಅವರು ಸನ್ಯಾಸ ತೊರೆದು ಸಂಸಾರಕ್ಕೆ ಪ್ರವೇಶಿಸಲು ಹಿಂದೇಟು ಹಾಕದೇ ಒಂದು ಕಾಲಘಟ್ಟದಲ್ಲಿ ವಿದ್ಯಾಭೂಷಣರ ಕ್ರಾಂತಿಕಾರಕ ನಿಲುವು ಕರ್ನಾಟಕದಾದ್ಯಂತ ಮನೆ ಮಾತಾಗಿತ್ತು. ವಿದ್ಯಾಭೂಷಣರ ಬದುಕು ಮತ್ತು ಸಂಗೀತ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಸಂಗೀತದಲ್ಲಿ ಆಸಕ್ತಿ ಮತ್ತು ಸಂಗೀತದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಕೃತಿಯ ಬಗ್ಗೆ ಹೀಗೆ ಬರೆದಿದ್ದಾರೆ-

ಅತ್ಯಂತ ಪ್ರಾಮಾಣಿಕವಾಗಿ, ಯಾವುದೇ ರಾಗ ದ್ವೇಷಗಳಿಲ್ಲದೆ, ತಮ್ಮೊಳಗಿನ ಭಾವಗಳನ್ನು ಅತ್ಯಂತ ಸಂಯಮದಿಂದ ನವಿರಾದ ಭಾಷೆಯಲ್ಲಿ ವಿದ್ಯಾಭೂಷಣರು ಹಿಡಿದಿಟ್ಟಿರುವುದು ಈ ಕೃತಿಯ ವಿಶೇಷ.
ಆತ್ಮಚರಿತ್ರೆಗಳೆಂದರೆ, ಆತ್ಮವಂಚನೆಯ ದಾಖಲೆಯ ಕೃತಿಗಳು ಎಂಬ ಸ್ಥಿತಿ ತಲುಪಿರುವ ಈ ದಿನಗಳಲ್ಲಿ ಈ ಕೃತಿ ವಿಭಿನ್ನವಾಗಿ ನಿಲ್ಲುತ್ತದೆ.

ಕೃತಿ ಆಯ್ದ ಭಾಗ-

ಒಬ್ಬ ಭಯಂಕರ ಸಮಾಜಸುಧಾರಕನಾಗಿ ಹೊರಹೊಮ್ಮಿ ಜನತೆಯ ಉದ್ದಾರ ಮಾಡಿಬಿಡಬೇಕೆಂಬ ಉದ್ದೇಶವೇ, ಮಹತ್ವಾಕಾಂಕ್ಷೆಯೇ ನನಗಿರಲಿಲ್ಲ ಅದು ನನ್ನಿಂದ ಆಗುವ ಹೋಗುವ ಸಂಗತಿಯೇ ಆಗಿರಲಿಲ್ಲ. ಒಬ್ಬ ಜನ ಸಾಮಾನ್ಯನ, ಇನ್ನೂ ಸ್ವಲ್ಪ ಮರ್ಯಾದೆ ಕೊಟ್ಟು ಹೇಳುವುದಾದರೆ ಶ್ರೀಸಾಮಾನ್ಯನ ಸರ್ವೇ ಸಾಧಾರಣವಾದ ಜೀವನ್ಮುಖಿಯಾದ ಆಸೆ ಆಕಾಂಕ್ಷೆಗಳು ನನ್ನ ಮೆಚ್ಚಿನ ಮಡದಿ-ಬೆಚ್ಚನೆ ಮನೆ-ಮತ್ತೆ ವೆಚ್ಚಕ್ಕೆ ಹೊನ್ನು, ಇಷ್ಟೇ ನನ್ನ ಜೀವನದ ಗುರಿ. ಎಲ್ಲರಂತೆಯೇ ಸಂಗೀತ-ಸಾಹಿತ್ಯ ಸಾಲದೇ? ಆದರೆ ಇದೆಲ್ಲವೂ ಸಾತ್ವಿಕವಾಗಿ ಸಹಜವಾಗಿ ಬಂದುದಾಗಿರಲಿ ಎಂಬ ಸಣ್ಣ ಆದರ್ಶ, ಇವೇ ನನ್ನ ಗುರಿಯಾಗಿದ್ದುದು. ನಾನು ಪೀಠದಲ್ಲಿದ್ದು ಗುಟ್ಟಾಗಿಯೋ, ಅಥವಾ ಸ್ವಲ್ಪ ಮರ್‍ಯಾದೆಗೆಟ್ಟರೆ ಗೊತ್ತಾಗಿ, ಇದನ್ನು ಪಡೆಯಬಹುದಿತ್ತು. ಅದಕ್ಕಾಗಿ ಇಷ್ಟೊಂದು ಮಾನಸಿಕ ತೊಳಲಾಟವೇಕೆ? ಆದರೆ ನನ್ನ ಮನ ಒಪ್ಪಲೇ ಇಲ್ಲ. ನಮ್ಮ ತಂದೆಯವರಲ್ಲಿದ್ದ ಸಮಾಜದ ಕುರಿತಾದ ಅಂದರೆ, ಮೌಲ್ಯಗಳ ಕುರಿತಾದ ಗೌರವ ಬುದ್ದಿ ನನ್ನಲ್ಲಿದ್ದ ಆದರ್ಶ ಬದುಕಿನ ಕಲ್ಪನೆ, ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ ಅದು ಹಿರಿಯರ ಪುಣ್ಯ.

ಲೇಖಕರ ಇತರ ಕೃತಿಗಳು
10%
ಜನಪ್ರಿಯ ಕನಕದಾಸರ ಕೀರ್ತನೆಗಳು ....
ವಿದ್ಯಾಭೂಷಣ, Vidyabhooshana
Rs. 90    Rs. 81
10%
ಜನಪ್ರಯ ಕನಕದಾಸರ ಕೀರ್ತನೆಗಳು
ವಿದ್ಯಾಭೂಷಣ, Vidyabhooshana
Rs. 90    Rs. 81
Best Sellers
ನಮ್ಮ ಸಂವಿಧಾನ (Indian Constitution)
ಅಶೋಕ್ ಕುಮಾರ್, Ashok kumar
Rs. 494/-   Rs. 520
ವಿಜ್ಞಾನ ಕಲಿಯೋಣ ಸಂಪುಟ - 3(ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 385/-
ಭೌತಶಾಸ್ತ್ರ ಸೂತ್ರಗಳು (ಫಾರ್ಮುಲೇ)
ಚಿಕ್ಕಮಂಗಪ್ಪ, Chikkamangappa
Rs. 36/-   Rs. 40
ಎ ಆರ್ ಕೃಷ್ಣಶಾಸ್ತ್ರೀ ಅವರ ಬೆಲೆಬಾಳುವ ಬರಹಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 162/-   Rs. 180

Latest Books
ನಿಗೂಢ ನೇತಾಜಿ : ಸುಭಾಷ್ ಚಂದ್ರ ಬೋಸ್ ಕಣ್ಮರೆ - ಸಾವು ಶೋಧಪ್ರಬಂಧಗಳು
ಚೂಡಿ ಶಿವರಾಂ, Choodie Shivaram
Rs. 135/-   Rs. 150
ಚಿಪ್ಪೂ ಪುಟ್ಟನ ಚಮತ್ಕಾರ
ಶರ್ಮಿಳಾ ದೇವ್, Sharmila Dev
Rs. 81/-   Rs. 90
ಕೆ ಎಚ್ ರಾಮಯ್ಯ ಜೀವನ ಚರಿತ್ರೆ
ಬೋರಯ್ಯ ಎಚ್ ಎಂ , Boraiah H M
Rs. 190/-   Rs. 200
ಸೋಲಿಲ್ಲದ ಸರದಾರರು :ನೂರಾರು ಸ್ಫೂರ್ತಿದಾಯಕ ಸಾಧಕರ ಪರಿಛಯ
ಸಂಪಟೂರು ವಿಶ್ವನಾಥ್, Sampaturu Vishwanath
Rs. 203/-   Rs. 225


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.