|
|
|

| Rs. 50 | 10% |
Rs. 45/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಒಂದೇ ವಿಷಯದ ಅಥವಾ ವಿಚಾರದ ಕುರಿತು ಬರೆದ ಪುಸ್ತಕವಲ್ಲ. ಎಳೆಯರ ಮನಸ್ಸಿನಲ್ಲಿ ಪದೇ ಪದೇ ಮೂಡುವ, ಮೂಡಿ ಮಾಯವಾಗುವ ಕೆಲವು ಮುಖ್ಯ ಪ್ರಶ್ನೆಗಳ ಬಗ್ಗೆ ಚಿಂತನೆ ಮಾಡಲು ಪ್ರಚೋದಿಸುವ ಪುಸ್ತಕವಿದು. ದಿನವಿಡೀ ಆಟ, ಓದು ಮತ್ತು ಇತರ ಹವ್ಯಾಸಗಳಲ್ಲಿ ಕಾಲ ಕಳೆಯುತ್ತಿರುವವರಲ್ಲಿ ಒಮ್ಮೊಮ್ಮೆ ಮನಸ್ಸಿನಲ್ಲಿ ಹಲವಾರು ಕುತೂಹಲಕಾರಿ ಯೋಚನೆಗಳು ಬರುತ್ತವೆ. ಈ ಪುಸ್ತಕ ಅಂಥ ಯೋಚನೆಗಳ ಕುರಿತಾದದ್ದು. ಇಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಅವು ಪರಸ್ಪರ ಸಂಬಂಧವಿಲ್ಲದ ವಿಷಯಗಳು. ಆದರೂ ಈ ವಿಷಯಗಳು ಪ್ರತಿಯೊಬ್ಬನಿಗೂ ಒಂದಲ್ಲ ಒಂದು ವಿಧದಲ್ಲಿ ಮುಖ್ಯವಾದುವು. ನಾವೇಕೆ ಪ್ರಶ್ನೆಗಳನ್ನು ಕೇಳುತ್ತಿರಬೇಕು ? ನಂಬಿಕೆಗಳಿಂದ ನಮಗೇನು ಒಳ್ಳೆಯದಾಗಬಹುದು ? ಹಕ್ಕು, ನ್ಯಾಯ, ಸ್ವಾತಂತ್ರ್ಯ, ವೈಜ್ಞಾನಿಕ ಮನೋಭಾವ, ನೀತಿ, ಸೌಂದರ್ಯಪ್ರಜ್ಞೆ, ಇತಿಹಾಸ, ಮುಕ್ತ ಸಮಾಜ - ಇವೆಲ್ಲಾ ಪರಸ್ಪರ ಒಂದಕ್ಕೊಂದು ನೇರವಾದ ಸಂಬಂಧವಿರದ ವಿಷಯಗಳಾದರೂ, ಅವು ನಮ್ಮ ಜೀವನಕ್ಕೆ ನಿರ್ದಿಷ್ಟವಾದ ಅರ್ಥ ನೀಡುವ ವಿಷಯಗಳು. ಅವುಗಳ ಬಗ್ಗೆ ಇನ್ನೊಂದು ಕಿರುನೋಟ ನೀಡುವ ಪ್ರಯತ್ನ ಅಷ್ಟೆ. ಈ ಪುಸ್ತಕದ ಉದ್ದೇಶ ಪ್ರತಿಯೊಂದು ಜೀವನ ಸಂಬಂಧಿ ವಿಷಯದ ಬಗ್ಗೆ ಪ್ರಶ್ನಿಸುವ ಹವ್ಯಾಸವನ್ನು ಪ್ರೋತ್ಸಾಹಿಸುವುದು, ಪ್ರತಿಯೊಂದು ಸಂದೇಹವನ್ನು ಪ್ರಶ್ನೆಯಾಗಿ ಪರಿವರ್ತಿಸಿ ಸೂಕ್ತ ಉತ್ತರವನ್ನು ಕಂಡುಕೊಳ್ಳುವುದು, ಪ್ರಶ್ನೆಗಳ ಮೂಲಕ ಹಲವು ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆಯೆಂಬುದನ್ನು ಈ ಪುಸ್ತಕ ತೋರಿಸಿಕೊಡುವ ದಿಶೆಯಲ್ಲಿ ಸಹಕಾರಿಯಾಗಬೇಕೆಂಬ ಸಂಕಲ್ಪದ ಹಿನ್ನೆಲೆಯಲ್ಲಿ ಈ ಕೃತಿ ಒಂದು ಸಣ್ಣ ಪ್ರಯತ್ನ.
|
ಕೃಷ್ಣಮೂರ್ತಿ ತಾಳಿತ್ತಾಯರು ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿರುವ ತಾಳಿತ್ತಾಯರು ಸಾರ್ವಜನಿಕ ಮತ್ತು ಖಾಸಗಿ ರಂಗದ ಹಲವು ದೊಡ್ಡ ಸಂಸ್ಥೆಗಳಲ್ಲಿ ಸುಮಾರು ನಾಲು ದಶಕಗಳ ಸೇವೆ ಸಲ್ಲಿಸಿರುತ್ತಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
|
|
| |
|
|
|
|
|
|
|
|
|