|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂದಿನ ಗಡಿಬಿಡಿ, ಆತಂಕ, ವ್ಯಾಯಾಮವಿಲ್ಲದ ಜೀವನ ವಿಧಾನ ಮನುಷ್ಯನನ್ನು ಹಲವು ರೋಗಗಳಿಂದ ಬಳಲುವಂತೆ ಮಾಡಿವೆ. ಕೃಯಲ್ಲಿ ರಾಸಾಯನಿಕಗಳ ಬಳಕೆ, ಕಲಬೆರಕೆ ಆಹಾರ ಪದಾರ್ಥ ಇತ್ಯಾದಿಗಳಿಂದ ಆಹಾರ ವಿಷವಾಗುತ್ತಿದೆ. ಈ ದಿಸೆಯಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು, ಎಷ್ಟು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಾಮಾನ್ಯ ಪರಿಜ್ಞಾನ ಪ್ರತಿಯೊಬ್ಬನಿಗೂ ಅವಶ್ಯಕ. ಸಿಕ್ಕಿದ್ದನ್ನು ಮುಕ್ಕಿ, ಸಿಕ್ಕಿದ್ದನ್ನು ಕುಡಿದರೆ ಆರೋಗ್ಯವೂ ಹಾಳು, ನೆಮ್ಮದಿಯೂ ಹಾಳು. ಹಿತಮಿತವಾದ ಆಹಾರ ಸೇವನೆಯ ನಡುವೆ ಇರಬೇಕಾದ ವಿರಾಮ, ಮಾಂಸಾಹಾರ-ಸಸ್ಯಾಹಾರಗಳಲ್ಲಿ ಯಾವುದು ಉಚಿತ, ಯಾವ ವಯಸ್ಸಿಗರು ಎಂತಹ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡು ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿಸುತ್ತದೆ. ಜೀವನ ಉಲ್ಲಾಸಿತವಾಗುತ್ತದೆ. ಈ ದಿಸೆಯಲ್ಲಿ ಈ ಕೃತಿ ಮಾರ್ಗದರ್ಶಕವಾಗಿದೆ. ಹೆಸರಾಂತ ವೈದ್ಯ ಡಾ. ನಾ. ಸೋಮೇಶ್ವರ ಈ ಪುಸ್ತಕದ ಲೇಖಕರು.
|
| |
|
|
|
|
|
|
|
|
|