|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸತ್ತೆಯ ನಿರಂತರ ಕ್ರೌರ್ಯದ ಹಿನ್ನೆಲೆಯಲ್ಲಿ ವೃದ್ಧ ದಂಪತಿಗಳ ಹತಾಶ ಜೀವನವನ್ನು ಹಲವು ಎಳೆಗಳಲ್ಲಿ ಬಿಚ್ಚಿಡುವ ಈ ಕಾದಂಬರಿ ಮಾರ್ಕ್ವೆಜ್ನ ಪ್ರಸಿದ್ಧ ಕೃತಿಗಳಲ್ಲೊಂದು. ಇಲ್ಲಿರುವುದು ಯುದ್ಧಾನಂತರದಲ್ಲಿ ಬದುಕನ್ನು ಪುನಃ ಕಟ್ಟಲು ಸೆಣಸುತ್ತಿರುವ ಭಗ್ನ ಸಮಾಜ. ನಿವೃತ್ತಿವೇತನಕ್ಕಾಗಿ ಕಾಯುತ್ತಿರುವ ಕರ್ನಲ್, ಮತ್ತವನ ರೋಗಿ ಹೆಂಡತಿಯ ಸುತ್ತ ಕಟ್ಟಿದ ಕಥಾನಕದಲ್ಲಿ ಮನುಷ್ಯನ ಜೀವನವನ್ನು ಹಲವು ಹತ್ತು ಕಡೆಗಳಿಂದ ಕಾಡುವ ಭ್ರಷ್ಟತೆಯ ಕರಾಳ ಚಿತ್ರಣವಿದೆ. ಕರ್ನಲ್ ಜೋಡಿಯ ದಾಂಪತ್ಯ, ಪುತ್ರವಿಯೋಗದ ದುಃಖ, ದೈನಿಕವನ್ನು ಸಾಗಿಸಲು ಪಡಬೇಕಾಡ ಕಷ್ಟಗಳ ಜೊತೆಯಲ್ಲಿ ಅವರು ಭರಿಸಬೇಕಾದ ಅಧಿಕಾರಶಾಹಿಯ ಉಪೇಕ್ಷೆ, ಕರ್ನಲ್ನ ಕಾಯುವಿಕೆಯಲ್ಲಿರುವ ವ್ಯರ್ಥತೆ - ಹೀಗೆ ಹಲವು ನೆಲೆಗಳಲ್ಲಿ ಒಂದು ದುಃಸ್ವಪ್ನದಂತಿರುವ ಈ ರಚನೆಯು ಹರಡಿಕೊಂಡಿದೆ.
ಇಲ್ಲಿಯ ವಿಶೇಷ ಅನುಭವಲೋಕವು ಕನ್ನಡದೊಳಗೆ ಬರಬೇಕೆಂಬ ಇಚ್ಛೆಯಿಂದ ನಮ್ಮ ಪ್ರಸಿದ್ಧ ಕಥನಕಾರರಲ್ಲೊಬ್ಬರಾದ ಶ್ರೀನಿವಾಸ ವೈದ್ಯರು ಈ ಕಾದಂಬರಿಯನ್ನು ಅನುವಾದಿಸಿದ್ದಾರೆ. ವೈದ್ಯರ ಸೃಜನಶೀಲ ಪ್ರತಿಭೆ ಮತ್ತು ಪಾತ್ರಗಲ ಜೊತೆ ಅವರಿಗೆ ಒದಗಿಬಂದ ತಾದಾತ್ಮ್ಯದಿಂದಾಗಿ ನಾವು ಕೊಲಂಬಿಯಾ ದೇಶಕ್ಕೆ ಹೋಗಿ ಕರ್ನಲ್ನ ಜೀವನದ ಸುಖದುಃಖಗಳನ್ನು ಕಣ್ಣಾರೆ ಕಾಣುವಂತಾಗಿದೆ.
|
| | |
|
|
|
|
|
|
|
|