|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜಗದ ಮೋಹವನ್ನು ಹಲವು ಕತೆಗಾರರು ಬರೆದಿದ್ದಾರೆ. ಆದರೆ ಕ೦ನಾಡಿಗಾ ನಾರಾಯಣ ಅವರು ``೧ಇಹದ ಪರಿಮಳವನ್ನು`` ತಮ್ಮ ಕತೆಗಳಲ್ಲಿ ಹೊತ್ತು ತಂದಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ ಈ ಸ೦ಕಲನದಲ್ಲಿರುವ ಪ್ರತಿ ಕತೆಗಳೂ ಪರಿಮಳವನ್ನು ಅರಸುತ್ತಾ ಸಾಗುತ್ತವೆ. ಸಾಧಾರಣವಾಗಿ ಬದುಕಿನ `ವಾಸನೆ`ಗಳ ಕುರಿತಂತೆ ಬರೆದವರಿದ್ದಾರೆ. ಕಾಮ, ಪ್ರೇಮ, ಲೋಲುಪತೆ, ಬೆವರು ಇವುಗಳನ್ನು ನವ್ಯ ಸಾಹಿತ್ಯ ದಟ್ಟವಾಗಿ ಕಟ್ಟಿಕೊಟ್ಟಿದೆ. ಆದರೆ ಕಂನಾಡಿಗರದು ಪರಿಮಳದ ಸೆಳೆತವನ್ನು ಮನುಷ್ಯನೊಳಗೆ ಮಾನವೀಯ ನೆಲೆಯಲ್ಲಿ ಕಾಣುತ್ತಾರೆ. ಈ ಸ೦ಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ ಆದರೆ ಆ ಪರಿಮಳಕ್ಕಾಗಿ ತೆರಬೇಕಾದ ಭೌತಿಕ ಬದುತನ್ನು ಮೀರುವುದು ಕಷ್ಟ. ಇದು. ಕಥಾನಾಯಕ ಅಮೋಘವರ್ಷನ ಒಳಗಿನ ಸಂಘರ್ಷ. ಒಬ್ಬ ನಟ ಬದುಕಿನ ವೌಲ್ಯಗಳನ್ನು ಅದ್ಭುತವಾಗಿ ನಟಿಸಬಲ್ಲ. ಆದರೆ ಅದನ್ನು ತನ್ನ ಬದುಕಾಗಿಸುವ ಸ೦ದರ್ಭದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಸ೦ದರ್ಭದಲ್ಲಿ ``ಗ೦ಧದ ಬಾಗಿಲು`` ಇನ್ನೊ೦ದು ರೀತಿಯಲ್ಲಿ ಮನುಷ್ಯನೊಳಗಿನ ಒಳ ಹೊರಗಿನ ವಾಸನೆಯನ್ನು ತಿಳಿಸುತ್ತದೆ. ಒಂದು ದ್ವೇಷ, ಅಸೂಯೆಯಿಂದ ಕರಟಿದ ಪರಿಮಳ. ಇದೇ ಸ೦ದರ್ಭದಲ್ಲಿ ಅದರ ಬಾಗಿಲು ಮಾತ್ರ ಗಂಧದ ಪರಿಮಳ ಸೂಸುತ್ತದೆ. ಹೀಗೆ ಭಂಗಿಗಿರಿ, ಮಳೆ ಬೇರೆ ಬೇರೆ ರೀತಿಯಲ್ಲಿ ಇಹದ ವಾಸನೆಗಳ ವೈವಿಧ್ಯಗಳ ಸುತ್ತ ಸುತ್ತುತ್ತವೆ. ಉಳಿದಂತೆ ಕತೆಗಳು ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನಗಳ ತಿಕ್ಕಾಟಗಳನ್ನು ಹೇಳುತ್ತವೆ.
ಕಂನಾಡಿಗಾ ಅವರ ಕತೆ ಹೇಳುವ ರೀತಿ, ಪರಿಮಳವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ. ಮುನ್ನುಡಿಯಲ್ಲಿ ರಘುನಾಥ ಚ.ಹ. ಅವರು ಹೇಳುವ೦ತೆ ಕ೦ನಾಡಿಗಾ ಅವರು ಕಥೆಯೊಂದನ್ನು ನಿರೂಪಿಸುವ ಹೊತ್ತಿಗೆ ಅದರಾಚೆಗಿನ ಬೇರೊ೦ದು ಕಥನವನ್ನು ಕಾಣಿಸುವ ಮೂಲಕ ಬೆರಗು ಮೂಡಿಸುತ್ತಾರೆ. ನಾವು ಕ೦ಡ ಬದುಕನ್ನು ಮತ್ತೊ೦ದು ಕೋನದಲ್ಲಿ ನೋಡಲು ಒತ್ತಾಯಿಸುತ್ತಾರೆ. ಕ೦ನಾಡಿಗಾ ಅವರ ರಚನೆಗಳು ಕಥನ ಪ್ರೀತಿಯನ್ನು ಓದುಗನಲ್ಲಿ ಹೆಚ್ಚಿಸುವಂತಿದೆ.
- ಕೃಪೆ ವಾರ್ತಾ ಭಾರತಿ ವಿಮರ್ಶೆ
|
ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಇವರು ಬಿ.ಬಿ.ಎಂ.ಪಿ.ಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. “ಕಥಾಭೂಮಿ” ದ್ವೈಮಾಸಿಕದ ಗೌರವ ಸಂಪಾದಕರು.
|
|
| |
|
|
|
|
|
|
|
|
|