|
|
|

| Rs. 25 | 10% |
Rs. 23/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಮೆರಿಕದ ಬಂಡವಾಳಶಾಹಿ ಬಿಗಿಮುಷ್ಟಿಯ ಹಿಡಿತಕ್ಕೆ ಸಿಕ್ಕು ಉಸಿರುಕಟ್ಟುವಂಥ ಸ್ಥಿತಿಯಲ್ಲಿದ್ದ ಲ್ಯಾಟಿನ್ ಅಮೆರಿಕ ದೇಶಗಳನ್ನು ಒಂದುಗೂಡಿಸಿ, ಸಮಾಜವಾದಿ ವ್ಯವಸ್ಥೆಗಳತ್ತ ಮುನ್ನಡೆಸಿ ಹೊಸ ಚೈತನ್ಯ ಮೂಡಿಸಿದವರು ವೆನಿಜಿವೆಲಾದ ಅಧ್ಯಕ್ಷರಾಗಿದ್ದ ಹ್ಯೂಗೊ ರಾಫೆಲ್ ಚಾವೆಜ್. ದೇಶದ ಸಂಪನ್ಮೂಲಗಳನ್ನು ಇತರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಳ್ಳೆಹೊಡೆಯಲು ಬಿಡದೆ ತನ್ನ ದೇಶದ ಜನರ ಒಳಿತಿಗಾಗಿ ಬಳಸಿ, ಜನಾನುರಾಗ ಸಂಪಾದಿಸಿ ದಿಟ್ಟ ಹೋರಾಟಗಳನ್ನು ನಡೆಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಅಮೆರಿಕದ ಎಲ್ಲ ಕುಟಿಲ ನೀತಿಗಳಿಗೆ ಸೆಡ್ಡು ಹೊಡೆದು ಸಮಾಜವಾದಿ ರಾಷ್ಟ್ರ ಕ್ಯೂಬಾದೊಂದಿಗೆ ಬಾಂಧವ್ಯ ಸ್ಥಾಪಿಸಿದ್ದಲ್ಲದೆ ದೇಶದ ತೈಲೋದ್ಯಮದ ರಾಷ್ಟ್ರೀಕರಣ ಮಾಡಿ ಜಾಗತೀಕರಣ-ಉದಾರೀಕರಣ ಮುಂತಾದುವನ್ನು ವಿರೋಧಿಸಿ ಪ್ರಗತಿಗೆ ಪರ್ಯಾಯ ವ್ಯವಸ್ಥೆಯೂ ಇದೆಯೆಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನುಭಾವ ಈತ. ಇಂಥ ದಿಟ್ಟ ವ್ಯಕ್ತಿತ್ವದ ಕುರಿತು ಜಗತ್ತೇ ತಿಳಿಯಬೇಕಾದ ತುರ್ತು ಇಂದು ಬಹಳ ಇದೆ. ಈ ಕೃತಿಯಲ್ಲಿ ಅದನ್ನು ಪಡಿಮೂಡಿಸಿದವರು ಜಾಗತಿಕ ವಿದ್ಯಮಾನಗಳ ಮೇಲೆ ಸಮಥವಾಗಿ ಬೆಳಕು ಚೆಲ್ಲಬಲ್ಲವರಾದ ಲೇಖಕ, ಪತ್ರಕರ್ತ ಶ್ರೀ ಸಿ.ಆರ್. ಕೃಷ್ಣರಾವ್.
|
ಶ್ರೀ ಸಿ ಆರ್ ಕೃಷ್ಣರಾವ್ ನವಕರ್ನಾಟಕದ ಹಿರಿಯ ಸಂಪಾದಕರು. ಅಂಕಣ ಬರಹಗಾರರು. ಹಿರಿಯ ಪತ್ರಕರ್ತರೂ ಹೌದು. ‘ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರೂ ‘ನೊಬೆಲ್ ಪುರಸ್ಕೃತರು’ ಕೃತಿಯ ಲೇಖಕರೂ ಆಗಿದ್ದಾರೆ. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ.
|
|
| |
|
|
|
|
|
|
|
|
|