|
|
|

 | Rs. 110 | 10% |
Rs. 99/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
“ಗಣಿತ ಕುತೂಹಲ” ಸೂತ್ರ-ಸಮೀಕರಣಗಳ ಬ್ರಹ್ಮಗಂಟುಗಳ ತಲೆ ನೋವಿಲ್ಲದೆ ಇದನ್ನು ಎಲ್ಲಿ ಬೇಕಾದರೂ ಕೂತು ಓದಬಹುದು! ಕತೆ-ಉಪಕತೆಗಳನ್ನು ಹೇಳುತ್ತ, ಕಾವ್ಯನಾಟಕಗಳೊಳಗೆ ಹೋಗಿಬರುತ್ತ; ಮಗುವಿನ ಕೈಹಿಡಿದು ಹೂದೋಟದಲ್ಲಿ ಓಡಾಡಿಸಿ ನಡೆಯಲು ಕಲಿಸಿದಂತೆ ಈ ಹೊತ್ತಗೆ ಗಣಿತವನ್ನು ಹೇಳಿಕೊಡುತ್ತದೆ. ನೆಪೋಲಿಯನ್ ಬೋನಪಾರ್ಟೆಯ ಹೆಸರಿನಲ್ಲಿರುವ ಗಣಿತ ಪ್ರಮೇಯ, ಫೈಯ್ನ್ಮನ್ನ ಬಾಲ್ಯದಲ್ಲಿ ತಂದೆ ಹೇಳಿದ ಮಾತು, ಐನೂರು ವರ್ಷ ಕಳೆದರೂ ಪರಿಹಾರ ಕಾಣದ ಗೋಲ್ಡ್ಬಾಕ್ನ ಊಹೆ, ಕ್ಯಾಲೆಂಡರಿನ ಪರಿಷ್ಕಾರಕ್ಕಾಗಿ ಕೆಲವು ದಿನಗಳನ್ನು ಕಿತ್ತುತೆಗೆದ ಕತೆ, ಅನಂತಗಳಲ್ಲೂ ಹಲವು ಬಗೆಗಳಿವೆ ಎನ್ನುವುದನ್ನು ತೋರಿಸಿ ಕೊನೆಗೆ ದಾರುಣವಾಗಿ ತೀರಿಕೊಂಡ ಕ್ಯಾಂಟರ್, ತಮ್ಮ ಮೈಮೇಲಿನ ಎಲ್ಲ ಅಂಗಗಳನ್ನೂ ಸಂಖ್ಯೆಗಳನ್ನು ಸೂಚಿಸಲು ಬಳಸುವ ಬುಡಕಟ್ಟು ಜನ - ಹೀಗೆ ಇಲ್ಲಿನ ವಿಷಯವೈವಿಧ್ಯ ಬೆರಗುಹುಟ್ಟಿಸುವಂತಿದೆ.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|