|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸೂರ್ಯ, ಚಂದ್ರ ಮತ್ತು ನಕ್ಷತ್ರಗಳ ನೆರವಿನಿಂದ ಮನುಷ್ಯ ಹಗಲು-ರಾತ್ರಿಗಳನ್ನು ಗುರುತಿಸಲು ಕಲಿತನಂತರ, ಗಡಿಯಾರದ ಆವಿಷ್ಕಾರದ ಮೂಲಕ ಕರಾರುವಾಕ್ಕಾದ ಕಾಲಗಣನೆಯನ್ನು ರೂಢಿಸಿಕೊಂಡಿರುವ ಇಂದಿನವರಿಗೆ ಕ್ರಮಿಸಿದ ದಾರಿ ಅತ್ಯಂತ ದೀರ್ಘ, ಕುತೂಹಲಕಾರಿ ಮತ್ತು ರೋಚಕದ್ದಾಗಿದೆ. ಪ್ರಾರಂಭದಲ್ಲಿ ನೆರಳು ಗಡಿಯಾರ, ತೈಲ ಗಡಿಯಾರ ಮತ್ತು ಮರಳು ಗಡಿಯಾರಗಳ ಬಳಕೆ. ಪ್ರತಿಯೊಂದಕ್ಕೂ ಅದರದೇ ಆದ ಪರಿಮಿತಿ. ಸಾಕಷ್ಟು ಶೋಧನೆಯ ನಂತರ ಯಂತ್ರ ಗಡಿಯಾರಗಳು ಬಳಕೆಗೆ ಬಂದವು. ಪೆಂಡುಲಮ್, ಸ್ಪ್ರಿಂಗ್, ಲಿವರ್-ಹೀಗೆ ಒಂದೊಂದೇ ಭಾಗ ಸೇರ್ಪಡೆಗೊಂಡು, ಗಡಿಯಾರ ಟಿಕ್ ಟಿಕ್ ಮಿಡಿತದೊಂದಿಗೆ ಮೊದಲ ಬಾರಿಗೆ ಗಂಟೆ ಬಾರಿಸಿದಾಗ ಮನುಷ್ಯನ ಪುಳಕಕ್ಕೊಂದು ಮಿತಿಲ್ಲ.
|
| |
|
|
|
|
|
|
|
|