|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜಿ.ಪಿ. ರಾಜರತ್ನಂ ಎಂದಕೂಡಲೆ ಅವರ ‘ಯೆಂಡ್ಕುಡ್ಕ ರತ್ನ‘ ನೆನಪಾಗುತ್ತಾನೆ. ರಾಜರತ್ನಂ ಅವರು ತಮ್ಮ ಜೀವಮಾನದಲ್ಲಿಯೇ ಒಮ್ಮೆಯೂ ಹೆಂಡವನ್ನು ಮುಟ್ಟದಿದ್ದರೂ, ಕುಡುಕನ ಪರಕಾಯ ಪ್ರವೇಶ ಮಾಡಿದವರಂತೆ ತಮ್ಮ ಅಪಾರ ಕನ್ನಡ ಪ್ರೇಮವನ್ನು ಅವನ ನಾಲಿಗೆಯಿಂದ ಹೊರಡಿಸಿದರು. ‘ರತ್ನನ್ ಪದಗಳು‘ ಹಾಗೂ ‘ನಾಗನ ಪದಗಳು‘ ಮೂಲಕ ದಾಂಪತ್ಯ ಜೀವನದ ಸೊಗಸನ್ನು ನಮಗೆ ಮನಮುಟ್ಟುವಂತೆ ಕಟ್ಟಿಕೊಡುತ್ತಾರೆ. ಬೌದ್ಧಧರ್ಮ ಹಾಗೂ ಜೈನಧರ್ಮಗಳನ್ನು ಅವುಗಳ ಮೂಲಭಾಷೆಯಲ್ಲಿಯೇ ಅಧ್ಯಯನ ಮಾಡಿ ಕನ್ನಡಕ್ಕೆ ದಕ್ಕಿಸಿದ ರಾಜರತ್ನಂ ಪ್ರಾತಃಸ್ಮರಣೀಯರೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ‘ನಾಯಿಮರಿ ರಾಜರತ್ನಂ‘ ಅವರು ತಮ್ಮ ಮಕ್ಕಳ ಪದ್ಯಗಳ ಮೂಲಕವೇ ಕನ್ನಡಿಗರ ಮನದಲ್ಲಿ ಚಿರಕಾಲ ಉಳಿಯುತ್ತಾರೆ. ರಾಜರತ್ನಂ ಶರೀರ ಉಕ್ಕು. ಅವರ ಕಂಠ ಜಯಗಂಟೆಯನ್ನು ಮೀರಿಸುವಂಥದ್ದು. ಅವರ ಸರಳ ಉಡುಪು ಹಾಗೂ ಸರಳ ಬದುಕು ಸದಾ ಅನುಕರಣೀಯ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|