|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾರ್ಲ್ ಮಾರ್ಕ್ಸ್ನಂತೆ ಪ್ರಷ್ಯ ರಾಜ್ಯದಲ್ಲಿ ಜನಿಸಿದ ಫ್ರೆಡರಿಕ್ ಏಂಗೆಲ್ಸ್ಗೆ ಸ್ಥಿತಿವಂತ ಕುಟುಂಬದ ಹಿನ್ನೆಲೆಯಿದ್ದರೂ ತನ್ನ ಜೀವನಪರ್ಯಂತ ಆತ ಶ್ರಮಿಕರ, ಶೋಷಿತರ ಹಾಗೂ ಸಮಾಜದ ಅಂಚಿನಲ್ಲಿರುವವರ ಪರವಾಗಿ ಗಟ್ಟಿದನಿ ಎತ್ತಿದ; ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿದ. ಬಹುಮುಖಿ ವ್ಯಕ್ತಿತ್ವದ ಏಂಗೆಲ್ಸ್ ರಾಜಕಾರಣ, ತತ್ವಶಾಸ್ತ್ರ, ಸಮಾಜಶಾಶ್ತ್ರ, ಇತಿಹಾಸ, ಚಿತ್ರಕಲೆ, ಮಿಲಿಟರಿ ಶಾಸ್ತ್ರ ಇತ್ಯಾದಿ ಹತ್ತು ಹಲವು ವಿಷಯಗಳಲ್ಲಿ ಆಳವಾಗಿ ಅಧ್ಯಯನ ನಡೆಸಿದ ಕ್ರಾಂತಿಕಾರಿಯಾಗಿದ್ದ.
ವಿಶ್ವದ ದುಡಿಯುವ ಜನತೆಯ ಹೋರಾಟಗಳಿಗೆ ಒಂದು ಸ್ಪಷ್ಟ ಸೈದ್ಧಾಂತಿಕ ತಳಹದಿಯನ್ನು ರೂಪಿಸಿದ ನಿಟ್ಟಿನಲ್ಲಿ ಸ್ಥಾಪನೆಗೊಂಡ ‘ಅಂತರರಾಷ್ಟ್ರೀಯ‘ದ ಹಿಂದೆ ಏಂಗೆಲ್ಸ್ನ ಕರ್ತೃತ್ವ ಶಕ್ತಿಯ ಕೊಡುಗೆಯೂ ಇತ್ತು. ‘ಆಂಟಿ ಡ್ಯೂರಿಂಗ್‘, ‘ಕಂಡಿಶನ್ ಆಫ್ ದಿ ವರ್ಕಿಂಗ್ ಕ್ಲಾಸ್ ಇನ್ ಇಂಗ್ಲೆಂಡ್ ಇನ್ 1844‘, ‘ದಿ ಆರಿಜಿನ್ ಆಫ್ ದಿ ಫ್ಯಾಮಿಲಿ‘ ಮುಂತಾದ ಗಹನ ಗ್ರಂಥಗಳನ್ನು ರಚಿಸಿದ ಏಂಗೆಲ್ಸ್ ದಂತಗೋಪುರದ ತತ್ವಶಾಸ್ತ್ರಜ್ಞನಾಗಿರಲಿಲ್ಲ. ಕಾರ್ಯಾಚರಣೆಗಳಲ್ಲಿ ತೊಡಗಿ ತನ್ನ ಅಪೂರ್ವ ಛಾಪನ್ನು ಮೂಡಿಸಿದ. ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವನ್ನು ಅನ್ವೇಷಿಸುವ ಕ್ರಾಂತಿಕಾರಿಗಳಿಗೆ, ಹೋರಾಟಗಾರರಿಗೆ ಏಂಗೆಲ್ಸ್ ಭರವಸೆಯ ದಾರಿದೀಪವಾಗಿದ್ದಾನೆ.
|
ಬ್ಯಾಂಕ್ ನೌಕರ ಚಳವಳಿಯ ಸಕ್ರಿಯ ಕಾರ್ಯಕರ್ತ ರಾಗಿರುವ ಶ್ರೀ ಮ. ಶ್ರೀ. ಮುರಳಿ ಕೃಷ್ಣ ಪತ್ರಿಕೆ, ನಿಯತಕಾಲಿಕೆ ಗಳಿಗೆ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಪ್ರಕಟಿತ ಬರೆಹಗಳನ್ನೊಳಗೊಂಡ "ಸ್ಪಂದನ" ಇವರ ಪ್ರಥಮ ಪುಸ್ತಕ. ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರ "ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ" ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ, ಸಂಗೀತ, ಸಿನಿಮಾ, ಚಾರಣ ಇತ್ಯಾದಿ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.
|
|
| |
|
|
|
|
|
|
|
|
|