|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಂಗಾತ ಪುಸ್ತಕ, Sangata Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
100 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
1130630 |
ಎಲ್ಲಎಲ್ಲೆ ಮೀರಿ
(ಕಾಶ್ಮೀರಿ ಸಾಹಿತ್ಯದ ಮೊದಲ ಕವಿ ಲಾಲ್ ದೇಡ ಕವಿತೆಗಳು)
ಅನುವಾದ : ವಿಜಯಾ ಗುತ್ತಲ
ಲಾಲ್ ದೇಡಳ ಕವಿತೆಗಳು ಹೊಸದೊಂದು ದರ್ಶನ ಮಾಡಿಸುತ್ತವೆ. ನಮ್ಮ ನೆಲದ ಅಕ್ಕಮಹಾದೇವಿಯಂತೆ ತೋರುವ ಲಾಲ್ ದೇಡ್ ಮಂಡಿಸುವ ಅನುಭವಲೋಕದ ತೀವ್ರತೆ ನಮ್ಮನ್ನು ಗಾಢವಾಗಿ ಕಲಕುತ್ತದೆ. ಬದುಕಿನ ಅನುದಿನದ ಪಾಡುಗಳನ್ನೇ ಹಾಡಾಗಿಸುವ ಕ್ರಮ ಲಾಲ್ಳನ್ನು ಜನರ ಕವಿಯಾಗಿಸಿದೆ; ಕಾಶ್ಮೀರದ ತುಂಬಾ ಮನೆ ಮಾತಾಗಿಸಿದೆ.
ಲಾಲ್ ದೇಡಳ ಕವಿತೆಗಳು ಕನ್ನಡಕ್ಕೆ ಬಂದಿದ್ದು ಅಪರೂಪ. ಅಲ್ಲಲ್ಲಿ ಕೆಲವರು ಬಿಡಿ ಬಿಡಿಯಾಗಿ ಅನುವಾದಿಸಿದ್ದರೂ ಪೂರ್ತಿ ಒಂದು ಕೃತಿಯ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಗ್ರೀಕ್ ಹೊಸ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದ ವಿಜಯಾ ಗುತ್ತಲ ಅವರ `ಎಲ್ಲ ಎಲ್ಲೆ ಮೀರಿ` ಈ ಸಂಕಲನ ಆ ಮೊದಲ ಹೆಗ್ಗಳಿಕೆಗೆ ಪಾತ್ರವಾಗಿದೆ.
`ಸಂಗಾತ` ಪತ್ರಿಕೆಯಲ್ಲಿ ಲಾಲ್ ದೇಡಳ ಕೆಲ ಕವಿತೆಗಳು ಪ್ರಕಟವಾದಾಗ ಬಹಳ ಜನ ಓದಿ ಮೆಚ್ಚಿಕೊಂಡು ಸಂಕಲನ ರೂಪದಲ್ಲಿ ತರಲು ಒತ್ತಾಯಿಸಿದ್ದರು. ಅದು ಈಗ ಕೈಗೂಡುತ್ತಿದೆ. ವಿಜಯಾ ಅವರು ಸಮರ್ಥವಾಗಿ ಅನುವಾದ ಮಾಡಿಕೊಟ್ಟಿದ್ದಾರೆ. ಲಾಲ್ ದೇಡಳ ಕವಿತೆಗಳು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ಲಾಲ್ ದೇಡಳ ಕುರಿತು ವಿಜಯಾ ಅವರು ಬರೆದ ದೀರ್ಘ ಪ್ರಸ್ತಾವನೆಯೊಂದಿಗೆ ಓ.ಎಲ್.ನಾಗಭೂಷಣ ಅವರ ಮುನ್ನುಡಿ ಇದೆ.
|
| | |
|
|
|
|
|
|
|