|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಲ್ಲಿನ ಕಥಗಳು ಭಾರತದ ಈಶಾನ್ಯ ಗಡಿಗಳಲ್ಲಿ ಇಂದಿಗೂ ಭಯೋತ್ಪಾದನೆಯನ್ನೇ ತಮ್ಮ ಕಸುಬಾಗಿಸಿಕೊಂಡಿರುವ ಕೆಲವು ದೇಶಗಳ ಪೂರ್ವೇತಿಹಾಸದ ಆಧಾರದಿಂದ ಬರೆದವು. ಇಂದಿಗಿಂತ ಇನ್ನೂ ಹಲವು ಪಟ್ಟು ಕ್ರೌರ್ಯವನ್ನು ಮೆರೆದ, ಜಾನಪದ ಗೀತೆಗಳ ಮೂಲಕ ಇತಿಹಾಸವನ್ನು ಕೆದಕಿ ಸಂಗ್ರಹಿಸಿದ, ಐತಿಹಾಸಿಕ ಆಧಾರಗಳನ್ನುಳ್ಳ ಇವುಗಳನ್ನು ಓದಿದರೆ ಮೈನವಿರೇಳುತ್ತದೆ, ರಕ್ತ ಹೆಪ್ಪುಗಟ್ಟಿದಂತಾಗುತ್ತದೆ. ಹಿಂದೆ ಇಂಗ್ಲಿಷ್ ಆಡಳಿತಕ್ಕೂ ಇಂದಿನ ಭಾರತದ ಕೇಂದ್ರ ಸರಕಾರಕ್ಕೂ ಸಾಕಷ್ಟು ನಡುಕ ಮತ್ತು ತಲೆನೋವನ್ನುಂಟು ಮಾಡಿದ್ದ ಪುಟ್ಟ ದೇಶಗಳ ಕಥೆಗಳಿವು. ಕ್ರೌರ್ಯವೇ ಇವುಗಳ ಜೀವಾಳ. ಬುಡಕಟ್ಟು ಸಂಸ್ಕೃತಿಯನ್ನೇ ನೆಚ್ಚಿಕೊಂಡು ನಾಗರಿಕ ಜೀವನ ನಿರಾಕರಿಸುವ ಇಲ್ಲಿನ ಜನರು ಧೈರ್ಯಕ್ಕೆ ಹೆಸರಾದವರು. ಇಂಥ ಕಥೆಗಳು ನಮಗೆ ತೀರಾ ಹೊಸ ಅನುಭವವನ್ನಷ್ಟೇ ನೀಡದೆ ಅವರ ಬಗ್ಗೆ ಆಲೋಚಿಸುವಂತೆ ಮಾಡಬಲ್ಲವು.
|
ಡಾ|| ಎಚ್. ಎಸ್. ಎಂ. ಪ್ರಕಾಶ್ ಭೂವಿಜ್ಞಾನಿ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯಲ್ಲಿ ಅಧಿಕಾರಿ. ದೇಶದ ನಾನಾ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು, ಅತಿ ದುರ್ಗಮವಾದ ಸಾತ್ಪುರ ಬೆಟ್ಟಸಾಲುಗಳಲ್ಲಿ ಭೂ ವೈಜ್ಞಾನಿಕ ಸರ್ವೇಕ್ಷಣ ಮಾಡಿದವರು. ಆಂಧ್ರ ಪ್ರದೇಶದ, ಕರ್ನಾಟಕದ ಹಲವಾರು ಕಡೆ ಚಿನ್ನ, ವಜ್ರ, ತಾಮ್ರ, ಫಾಸ್ಪರೈಟ್ ಮುಂತಾದ ನಿಕ್ಷೇಪಗಳ ಅನ್ವೇಷಣ ಕಾರ್ಯ ಮಾಡಿದವರು. ಇವರ ಅನೇಕ ವೈಜ್ಞಾನಿಕ ಲೇಖನಗಳು ಪ್ರಕಟವಾಗಿವೆ. ಇಂಗ್ಲಿಷಿನಿಂದ ಕನ್ನಡಕ್ಕೆ ಕೆಲವು ಪುಸ್ತಕಗಳನ್ನು ಭಾಷಾಂತರಿಸಿದ್ದಾರೆ.
|
|
| |
|
|
|
|
|
|
|
|