|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ (1929-2006) ನಮಗೆಲ್ಲ ರಾಜ್ಕುಮಾರ್ ಎಂದು ಪರಿಚಿತರು. ಅವರ ಸಮಕಾಲೀನ ಅಭಿಮಾನಿಗಳಿಗೆ ಅವರು ರಾಜಣ್ಣ! ಉಳಿದವರಿಗೆ ಅಣ್ಣಾವ್ರು! 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ‘ನಟ ಸಾರ್ವಭೌಮ‘ರು! ಭಾರತೀಯ ಚಲನಚಿತ್ರ ರಂಗವು ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಘನ ಸರ್ಕಾರವು ಪದ್ಮಭೂಷಣ ನೀಡಿ ಸನ್ಮಾನಿಸಿದೆ. ರಾಜ್ಯ ಸರ್ಕಾರವು ‘ಭಾರತರತ್ನ‘ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕನ್ನಡಕ್ಕೆ ಮತ್ತೊಂದು ಹೆಸರು ರಾಜ್ಕುಮಾರ್! ಅವರಿಗೆ ಸಂದಷ್ಟು ಪ್ರಶಸ್ತಿಗಳು, ಬಿರುದುಗಳು ಸನ್ಮಾನಗಳು ಯಾವ ಕನ್ನಡ ನಟನಿಗೂ ದೊರೆತಿಲ್ಲ. ರಾಜ್ಕುಮಾರ್ ಅಭಿಮಾನಿಗಳನ್ನು ‘ಅನ್ನದಾತ‘ರೆಂದು ಕರೆಯುತ್ತಿದ್ದರು. ಗೋಕಾಕ್ ಚಳುವಳಿಗೆ ರಾಜ್ಕುಮಾರ್ ತಿರುವನ್ನು ತಂದದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ? ರಾಜ್ಕುಮಾರ್ ಅವರಂತಹ ಮೇರುನಟ ಯುಗಕ್ಕೊಮ್ಮೆ ಮಾತ್ರ ಘಟಿಸಲು ಸಾಧ್ಯ.
|
| |
|
|
|
|
|
|
|
|
|