|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಮೆರಿಕದಲ್ಲಿ ಪಿಎಚ್ ಡಿ ಮಾಡಿ, ಅಮೆರಿಕದ 35 ರಾಜ್ಯಗಳಲ್ಲಿ ಓಡಾಡಿ, 22 ರಾಜ್ಯಗಳ ಅರಣ್ಯವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ, ಅಮೆರಿಕ ಸರ್ಕಾರ ನೀಡಿದ ಕೆಲಸವನ್ನು ತಿರಸ್ಕರಿಸಿ ಭಾರತಕ್ಕೆ ಬಂದ ಯುವ ವಿಜ್ಞಾನಿಯನ್ನು ಜನರು ಹಾಸ್ಯ ಮಾಡಿದರು. ಆಗ ಆ ಯುವ ವಿಜ್ಞಾನಿಯು "ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎಂದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿಯನ್ನು ಕೊಡಬಲ್ಲವು. ಹಣ ಸಂಪಾದನೆಗಾಗಿ ಯಾಂತ್ರಿಕವಾಗಿ ಜೀವಿಸುವುದೆಂದರೆ ಆದರ್ಶಗಳಿಗೆ ತಿಲಾಂಜಲಿಯನ್ನು ಕೊಟ್ಟಂತೆ" ಎಂದು ನುಡಿದರು. ಅವರೇ ಡಾ|| ಕೃಷ್ಣಾನಂದ ಲಕ್ಷ ್ಮಣ ಕಾಮತ್. ಕಾಮತರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಹೇಗೆ ಸರಳವಾಗಿ ಹೇಳಬಹುದು ಎನ್ನುವುದನ್ನು ತೋರಿಸಿಕೊಟ್ಟ ಆದ್ಯರು. ಛಾಯಾಗ್ರಹಣ, ರೇಖಾಚಿತ್ರಗಳು ಹಾಗೂ ಜಲವರ್ಣ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|
|
|
|
|
|