|
|
|

| Rs. 95 | 10% |
Rs. 86/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇವು ವ್ಯಕ್ತಿಚಿತ್ರಣಗಳು. ಲೇಖಕಿಯರಾಗಿ, ಸಮಾಜ ಸೇವೆಯಲ್ಲಿ ತೊಡಗಿ, ದುಡಿವ ಮಹಿಳೆಯಾಗಿ ತಮ್ಮ ಕುಶಲತೆಯನ್ನು ಮೆರೆದಿರುವವರ ಬದುಕಿನ ವಿವರಗಳು ಇಲ್ಲಿವೆ. ತಾವಾಯಿತು-ತಮ್ಮ ಮನೆಯಾಯಿತೆಂದುಕೊಂದು ಅಂತರ್ಮುಖಿಯಾಗಿದ್ದ ಮಹಿಳೆ ಇಂದು ತನ್ನ ಅಭ್ಯುದಯಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾಳೆ. ಹೀಗೆ ಜೀವನವನ್ನು ರೂಪಿಸಿಕೊಂಡು ಇತರರಿಗೂ ಮಾರ್ಗದರ್ಶನ ನೀಡಿ ಜನಪ್ರಿಯತೆಗಳಿಸಿ ಆದರ್ಶ ಬಾಳನ್ನು ಬಾಳಿದ್ದಾರೆ. ಮಹಿಳೆ ಪ್ರಯತ್ನಪಟ್ಟರೆ ಏನೆಲ್ಲಾ ಸಾಧಿಸಬಹುದೆಂದು ಈ ಕೃತಿಯನ್ನೋದಿದರೆ ತಿಳಿಯುತ್ತದೆ. ಇವರಲ್ಲಿ ಹೆಚ್ಚಿನವರು ಕನ್ನಡ ಬರಹಗಾರ್ತಿಯರು. ಅವರಿಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಇದನ್ನು ಈ ಪುಸ್ತಕ ಪರಿಚಯಿಸುತ್ತದೆ.
|
ಶ್ರೀಮತಿ ನಾಗಮಣಿ ಎಸ್ ರಾವ್ ‘ತಾಯಿನಾಡು’ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿ ರಾಜ್ಯದ ಪ್ರಪ್ರಥಮ ಕಾರ್ಯನಿರತ ಮಹಿಳಾ ಪತ್ರಕರ್ತೆ ಎಂದು ಹೆಸರು ಗಳಿಸಿದ್ದಾರೆ. ಆಕಾಶವಾಣಿಯಲ್ಲಿ ಜವಾಬ್ದಾರಿಯುತ ವಿವಿಧ ಸ್ಥಾನಗಳಲ್ಲಿದ್ದು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ, ಇತರ ಸಾಂಸ್ಕೃತಿಕ ರಂಗ, ಸಾಹಿತ್ಯ ಕ್ಷೇತ್ರಗಳಲ್ಲೂ ಇವರ ಸೇವೆ ಅನುಪಮ. ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಟಿಎಸ್ಆರ್’ ಮಾಧ್ಯಮ ಪ್ರಶಸ್ತಿ ಇವರಿಗೆ ಲಭಿಸಿದೆ.
|
|
| |
|
|
|
|
|
|
|
|
|