|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಸಾಹಿತ್ಯ ಪರಿಷತ್ತಿನ ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿನಿಧಿ ಪ್ರಶಸ್ತಿ’ 2013 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಣ್ಣು ಬೆಳಕನ್ನು ಪ್ರತಿಫಲಿಸಿ ವಸ್ತುಗಳು ನಮಗೆ ಕಾಣುವಂತೆ ಮಾಡುವ ಪ್ರಮುಖ ಅಂಗ. ದೈಹಿಕ ಕಾಯಿಲೆಗಳಿಗೂ ಕಣ್ಣಿಗೂ ಏನಾದರೂ ನಂಟು ಇದೆಯೆ ? ಹೌದು, ಇದೆ - ಎನ್ನುತ್ತಾರೆ ಈ ಕೃತಿಯ್ ವೈದ್ಯ ಲೇಖಕರು. ಹಲವಾರು ದೈಹಿಕ ಕಾಯಿಲೆಗಳ ಇರುವಿಕೆ ಹಾಗೂ ಲಕ್ಷಣಗಳು ಕಣ್ಣನ್ನು ಪರೀಕ್ಷಿಸುವಾಗ ಪತ್ತೆಯಾದದ್ದುಂಟು.ಕಣ್ಣು ಹಳದಿಯಾದಾಗ ಕಾಮಾಲೆ, ದೃಷ್ಟಿಯಲ್ಲಿ ಏರುಪೇರಾದಾಗ ಮಧುಮೇಹ ಪತ್ತೆಯಾದಂತೆ ಇನ್ನಿತರ ದೈಹಿಕ ಕಾಯಿಲೆಗಳನ್ನು ಸಹ ಕಣ್ಣಿನಲ್ಲಿ ವ್ಯಕ್ತವಾಗುವ ಬಲು ಸೂಕ್ಷ್ಮ ವ್ಯತ್ಯಾಸಗಳಿಂದ ಪತ್ತೆಹಚ್ಚಬಹುದು. ಕಣ್ಣಿನ ತೊಂದರೆಗೆಂದು ನೇತ್ರ ವೈದ್ಯರಲ್ಲಿಗೆ ಹೋಗಿ “ಐ ಡ್ರಾಪ್ಸ್ ಕೊಡಿ ಸಾರ್” ಎಂದು ಪೀಡಿಸಿದಾಗ ಅವರು ಇನ್ನಿತರ “ಸ್ಪೆಷಲಿಸ್ಟ್” ವೈದ್ಯರನ್ನು ಕಾಣಿರೆಂದು ತಿಳಿಸಿದರೆ ಗೊಣಗುತ್ತೇವೆ. ಅವರು ಅದೇಕೆ ಹಾಗೆ ಹೇಳಿದ್ದೆಂದು ಈ ಕೃತಿಯನ್ನೋದಿದಾಗ ಮನವರಿಕೆ ಆಗುತ್ತದೆ. ಕಣ್ಣಿನಲ್ಲಿ ಯಾವ ದೈಹಿಕ ಕಾಯಿಲೆಯ ಲಕ್ಷಣ ಪತ್ತೆಯಾಗುವುದೆಂದೂ ಇನ್ನಿತರ ಭೀಕರ ಕಾಯಿಲೆಗಳಿಂದ ನಮ್ಮ ಕಣ್ಣುಗಳಿಗಾಗುವ ಹಾನಿಯನ್ನೂ ತಿಳಿಸುತ್ತದೆ.
|
ಡಾ|| ಎಚ್. ಎಸ್. ಮೋಹನ್ ಪ್ರಸಿದ್ಧ ನೇತ್ರ ತಜ್ಞರು. ಸಾಗರದಲ್ಲಿ ವಿಜಯ ಕಣ್ಣಿನ ಚಿಕಿತ್ಸಾಲಯ ನಡೆಸುತ್ತಿದ್ದು ಹಲವಾರು ರೀತಿಯ ಕಣ್ಣಿನ ತೊಂದರೆಗೊಳಗಾದವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಣ್ಣಿನ ರೋಗಗಳಿಗೆ ಸಂಬಂಧಿಸಿದಂತೆ ಇವರು ಬರೆದ ಅನೇಕ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದಾರೆ. ಫ್ರೀಲಾನ್ಸ್ ಜರ್ನಲಿಸ್ಟ್ ಆಗಿಯೂ ಇವರು ಪ್ರಸಿದ್ಧರು.
|
|
| |
|
|
|
|
|
|
|
|
|