|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದೇವರಾಜ ಅರಸು (1915-1982) ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ರಾಜ್ಯದ ಎಂಟನೆಯ ಮುಖ್ಯಮಂತ್ರಿ ಆಗಿ, ಕರ್ನಾಟಕದಲ್ಲಿ ‘ಅರಸು ಯುಗ‘ವನ್ನು ಸ್ಥಾಪಿಸಿದರು. ಅರಸು ಸಂಸ್ಕೃತವನ್ನು ಕಲಿತಿದ್ದರು. ಸಂಗೀತ, ಲಲಿತಕಲೆಗಳಲ್ಲಿ ಅಪಾರ ಆಸಕ್ತಿ. ಘನವಾದ ಶಾರೀರವಿದ್ದ ಅರಸು ರಾಘವಾಂಕನ ‘ಸಿಡಿಲು ಬಡಿದೊಡೆ ಹಿಡಿದ ಕೊಡೆ ಕಾವುದೇ‘ ಕಾವ್ಯ್ ಭಾಗವನ್ನು ವಾಚಿಸಿ ಬಹುಮಾನವನ್ನು ಪಡೆದಿದ್ದರು. ಸೈಗಲ್ ಹಾಗೂ ಪಂಕಜ್ ಮಲಿಕ್ ಅವರ ಹಾಡುಗಳು ತುಂಬಾ ಇಷ್ಟವಾಗಿದ್ದವು. ಕೆ.ವಿ. ಅಯ್ಯರ್ ವ್ಯಾಯಾಮ ಶಾಲೆಯನ್ನು ಸೇರಿ ಜಗಜಟ್ಟಿಯಾದರು. ‘ಕಿಂಗ್ಸ್ ಕಮಿಷನ್‘ ನಡೆಸಿದ ಸೇನಾಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೇನಾಧಿಕಾರಿಯಾಗಿ ಆಯ್ಕೆಯಾದರು. ಆದರೆ ಅಮ್ಮನ ಆಗ್ರಹದ ಮೇರೆಗೆ ಸೇನೆಗೆ ಸೇರಲಿಲ್ಲ. ಸ್ವತಃ ಮಹಾರಾಜರೇ ಸರ್ಕಾರಿ ಕೆಲಸವನ್ನು ಕೊಡಿಸುವುದಾಗಿ ಹೇಳಿದಾಗ ಅದನ್ನು ತಿರಸ್ಕರಿಸಿದರು. ಎಂದಿನವರೆಗೆ ಕರ್ನಾಟಕವಿರುವುದೋ ಅಂದಿನವರೆಗೆ ದೇವರಾಜ ಅರಸು ಮಾಡಿದ ಕ್ರಾಂತಿಕಾರಕ ಕೆಲಸಗಳೂ ಚಿರಕಾಲವಿರುತ್ತವೆ!
|
| |
|
|
|
|
|
|
|
|