|
|
|

 |
Rs. 175 10% |
|
Rs. 158/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
196 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184675702 |
ಕೋಡ್ |
: |
002447 |
ಚೀಣಾದ ತತ್ತ್ವಶಾಸ್ತ್ರ ಎಂದೊಡನೆ ಕನ್ಫ್ಯೂಶಿಯಸ್ ಮತ್ತು ತವೋ ಹೆಸರುಗಳು ಕೇಳಿಬರುತ್ತವೆ. ಆದರೆ ಅವೆರಡೇ ಚೀಣಾದ ತತ್ತ್ವಶಾಸ್ತ್ರ ಶಾಖೆಗಳಲ್ಲ. ಯಿನ್-ಯಾಂಗ್ ಶಾಖೆ ಮತ್ತು ಬೌದ್ಧಮತ ಸಹ ದಾರ್ಶನಿಕ ಬೆಳಕನ್ನು ಹರಿಸಿವೆ. ಎಲ್ಲ ಶಾಖೆಗಳನ್ನೂ ಚಾರಿತ್ರಿಕ ಮತ್ತು ಸಾಮಾಜಿಕ ಸನ್ನಿವೇಶಗಳ ತಿಳಿವಳಿಕೆಯೊಡನೆ ಪರಾಮರ್ಶೆ ಮಾಡುವ ಈ ಸಂಪುಟವು ಹೊಸ ಕಾಣ್ಕೆಗಳನ್ನು ನೀಡುತ್ತದೆ. ಭಾರತೀಯ ತತ್ತ್ವಶಾಸ್ತ್ರ ಶಾಖೆಗಳ ಧೋರಣೆಗಳೊಡನೆ ಅಲ್ಲಲ್ಲಿ ತುಲನೆ ಮಾಡಿರುವುದು ಗ್ರಂಥದ ವೈಶಿಷ್ಟ್ಯ. ತವೋ ಸಿದ್ಧಾಂತವು ಎಷ್ಟು ಜನಪರ ಮತ್ತು ಕನ್ಫ್ಯೂಶಿಯಸ್ನ ನೀತಿಶಾಸ್ತ್ರವು ಪ್ರತಿಷ್ಠಿತ ಶಕ್ತಿಗಳ ಆಳ್ವಿಕೆಗೆ ಹೇಗೆ ಮತ್ತು ಎಷ್ಟು ಬೆಂಬಲ ನೀಡಿದೆ ಎಂಬಿತ್ಯಾದಿ ಕುತೂಹಲಕರ ಚರ್ಚೆಗಳು ಅಗತ್ಯವಾಗಿವೆ. ಸಾಮಾನ್ಯವಾಗಿ ಅವುಗಳ ಹೆಸರುಗಳನ್ನು ಅಷ್ಟಾಗಿ ಪ್ರಸ್ತಾಪಿಸದಿದ್ದರೂ ಮೋ ಸಿದ್ಧಾಂತ ಹಾಗೂ ವೈಚಾರಿಕ ಶಾಖೆಗಳು ಚೀಣಾದ ತತ್ತ್ವಶಾಸ್ತ್ರ ಹೇಳುವ ಐದು ಭೂತವಸ್ತುಗಳ ಬದಲಾಗಿ ಚೀಣಾದಲ್ಲಿ ದಾರ್ಶನಿಕ ಸಿದ್ಧಾಂತವು ಬೇರೆ ರೀತಿಯ ಕಲ್ಪನೆಯನ್ನು ಮುಂದಿಟ್ಟಿರುವುದು ಸ್ವಾರಸ್ಯಕರ. ಚೀಣಾದ ಇತಿಹಾಸದ ಮಜಲುಗಳನ್ನು ಗುರುತಿಸಿ ತತ್ತ್ವಶಾಸ್ತ್ರದ ವಿಕಾಸವನ್ನು ನಿರೂಪಿಸಿರುವುದು ಈ ಗ್ರಂಥದ ವೈಶಿಷ್ಟ್ಯ.
ಲೇಖಕ ಡಾ. ಜಿ. ರಾಮಕೃಷ್ಣ ‘ಲೋಕ ತತ್ತ್ವಶಾಸ್ತ್ರ ಪ್ರವೇಶಿಕೆ’ಯ ಕನ್ನಡ ಸಂಪುಟಗಳ ಸಂಪಾದಕರು ಹಾಗೂ ಪ್ರಸ್ತುತ ಸಂಪುಟದ ಲೇಖಕರು. ಅವರೇ ಕೃತಿಯನ್ನು ಅನುವಾದ ಮಾಡಿದ್ದಾರೆ. ಪಾಶ್ಚಾತ್ಯ ಸಾಹಿತ್ಯ, ಇತಿಹಾಸ, ವೈದಿಕ ಸಾಹಿತ್ಯ, ಮುಂತಾದ ವಿಭಾಗಗಳಲ್ಲಿ ಪರಿಣತರಾದ ಜಿ. ಆರ್. ಅವರ ಮುನ್ನೋಟ, ಭಾರತೀಯ ವಿಜ್ಞಾನದ ಹಾದಿ, ಆಯತನ, ಭಗತ್ ಸಿಂಗ್ ಮುಂತಾದ ಕೃತಿಗಳು ಪ್ರಸಿದ್ಧವಾಗಿವೆ.
|
| | |
|
|
|
|
|
|
|
|