|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಚಾಣಕ್ಯನು ನಿಸ್ಸಂಶಯವಾಗಿಯೂ ಪ್ರಾಚೀನ ಭಾರತದ ಅತ್ಯುತ್ತಮ ರಾಜನೀತಿವಿಶಾರದನೂ, ಚಿಂತಕನೂ ಆಗಿದ್ದನು. ಆದರೆ, ಇಂದಿನವರೆಗೂ ಈ ರಾಜನೀತಿ ಪ್ರವೀಣನ ನೈತಿಕತೆಯ ದೃಷ್ಟಿಕೋನವು ಕತ್ತಲೆಯಲ್ಲೇ ಉಳಿದುಹೋಗಿರುತ್ತದೆ. ಚಾಣಕ್ಯ ಮಾದರಿಯ ಜ್ಞಾನವು ಕಾಲಾತೀತವಾಗಿದ್ದು, ಅದು ಎಂದಿಗೂ ಪ್ರಸ್ತುತವಾಗಿರುತ್ತದೆ. ಪ್ರಸಕ್ತ ಈ ಗ್ರಂಥವು ನೀತಿನಿಯಮಗಳ ಅವಶ್ಯಕತೆ ಹಾಗೂ ಅವುಗಳ ಶಾಶ್ವತ ಸ್ವರೂಪವನ್ನು ಕುರಿತಂತೆ ಎಲ್ಲರ ಮೇಲೂ ಬಲವಾದ ಪ್ರಭಾವವನ್ನು ಬೀರುತ್ತದೆ. ಚಾಣಕ್ಯನು ತನ್ನ ವಿಚಾರಗಳನ್ನು ಆಶ್ಚರ್ಯಕರವಾದ ಮುಂಧೋರಣೆಯಿಂದಲೂ ನಿಚ್ಚಳವಾಗಿರುವಂತೆಯೂ ವಿವರಿಸಿರುತ್ತಾನೆ. ಈ ಗ್ರಂಥದಲ್ಲಿ ಸ್ತ್ರೀ, ಕೌಟುಂಬಿಕ ಜೀವನ, ಮಾನವತೆಯ ಬಾಂಧವ್ಯ, ನೈತಿಕ ನಡವಳಿಕೆಗಳು ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ಕುರಿತಂತೆ ಅತ್ಯಲ್ಪ ಪದಸಮುಚ್ಚಯಗಳಲ್ಲಿ ಆಳವಾದ ವಿವರಣೆಯಿದೆ. ಆತನ ಅತ್ಯಾಶ್ಚರ್ಯಕರವಾದ ಕಾಲಜ್ಞಾನ, ದಿನನಿತ್ಯದ ಬದುಕನ್ನು ಕುರಿತಾದ ಅರ್ಥವತ್ತಾದ ಪ್ರತಿಫಲನಗಳು, ಹಾಗೂ ಕಠೋರವಾದ ಸುಭಾಷಿತಗಳು ಈ ಗ್ರಂಥವನ್ನು ಆಳವಾದ ವಿಚಾರ ಹಾಗೂ ವಿವೇಚನೆಗಳ ಶ್ರೀಮಂತ ಭಂಡಾರವನ್ನಾಗಿ ಮಾಡಿವೆ.
|
| | |
|
|
|
|
|
|
|