|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಚೇಲಾತ್ ಅಚ್ಯುತ ಮೆನನ್ ಕೇರಳ ಕಂಡ ಅತ್ಯುತ್ತಮ ಮುಖ್ಯಮಂತ್ರಿ. ವಿದ್ಯಾರ್ಥಿಯಾಗಿ ಪ್ರತಿಭಾವಂತರಾಗಿದ್ದ ಅಚ್ಯುತ ಮೆನನ್ ಕೇರಳ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರು. ತ್ರಿಶ್ಯೂರಿನ ಸೈಂಟ್ ಥಾಮಸ್ ಕಾಲೇಜಿನಲ್ಲಿ ಪದವಿಯನ್ನು ಪಡೆದು ತಿರುವನಂತಪುರದ ಸರ್ಕಾರಿ ಕಾನೂನು ಕಾಲೇಜನ್ನು ಸೇರಿ, ಹಿಂದು ಲಾ ವಿಷಯದಲ್ಲಿ ‘ಭಾಷ್ಯಂ ಅಯ್ಯಂಗಾರ್ ಚಿನ್ನದ ಪದಕ‘ವನ್ನು ಪಡೆದರು. ಕೆಲವು ದಿನಗಳ ಕಾಲ ತ್ರಿಶ್ಯೂರಿನಲ್ಲಿ ವಕೀಲ ವೃತ್ತಿಯನ್ನು ನಡೆಸಿದ ಅಚ್ಯುತ ಮೆನನ್ ಮೊದಲು ಕಾಂಗ್ರೆಸ್ ಪಕ್ಷವನ್ನು ಸೇರಿದರು. ನಂತರ 1942ರಲ್ಲಿ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಮಾರುಹೋಘಿ ಕಮ್ಯುನಿಸ್ಟರಾದರು. ಅಚ್ಯುತ ಮೆನನ್ ಉತ್ತಮ ಬರಹಗಾರರಾಗಿದ್ದರು. ‘ಲೋಕಚರಿತ್ರಸಂಗ್ರಹಮ್‘ ಮತ್ತು ‘ಸೋವಿಯತ್ ನಾಡು‘(1942) ಅವರ ಮೊದಲ ಎರಡು ಕೃತಿಗಳು. ‘ಕಿಸಾನ್ ಪಾಠ ಪುಸ್ತಕಮ್‘(1954), ‘ಕೇರಳ ಸಂಸ್ಥಾನಮ್ ಪ್ರಶ್ನಗಳುಂ ಸಾಧ್ಯತಗಳುಂ‘ (1956), ‘ಮನುಷ್ಯನ್ ಸ್ವಯಂ ನಿರ್ಮಿಕ್ಕುಣ್ಣು‘ (ಮೂಲ: ಗಾರ್ಡನ್ ಚೈಲ್ಡ್ ಅವರ ಮ್ಯಾನ್ ಮೇಕ್ಸ್ ಹಿಮ್ಸೆಲ್ಫ್), ‘ಬಾಲ್ಯ ಸ್ಮರಣಂಕಳ್‘ ಮತ್ತು ‘ತೀರಾನ್ ಜೇತುತ ಉಪನ್ಯಾಸಂಗಳ್‘ ಎಂಬ ಎರಡು ಕೃತಿಗಳು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿವೆ.
|
| |
|
|
|
|
|
|
|
|
|