|
|
|

| Rs. 300 | 10% |
Rs. 270/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಬಹುಶಃ ಜಾತಕ ಕಥೆಗಷ್ಟು ಸುಂದರವಾದ ಕಥೆಗಳನ್ನು ನಾವೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಕಂಡರೂ ಅವುಗಳಲ್ಲಿ ಏನೋ ಒಂದು ಕೊರತೆ ಅಥವಾ ಊನವಿರುತ್ತದೆ. ಆದರೆ ಜಾತಕ ಕಥೆಗಳು ಅಂಥಹ ಲೋಪವನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ, ಅವುಗಳ ಸಮಗ್ರ ಮತ್ತು ಸಮ್ಯಕ್ ದೃಷ್ಠಿಕೋನದಿಂದ ಕೂಡಿದ ಪರಿಪೂರ್ಣ ಕಥೆಗಳಾಗಿದೆ ಎಂಬುದು ಜಾಗತಿಕ ಮಟ್ಟದ ಸಾಹಿತ್ಯ ವಿಮರ್ಶಕರ ಒಟ್ಟಾಭಿಪ್ರಾಯವಾಗಿದೆ.
ಅವು ಗೌತಮ ಬುದ್ಧರ ಬದುಕು ಮತ್ತು ಬೋಧನೆಗಳನ್ನು ಒಲಗೊಂಡಿದೆ. ಇಲ್ಲಿನ ಮೂಲಭೂತ ಪ್ರಶ್ನೆ ಎಂದರೆ, ನಾವೇಕೆ ಒಳ್ಳೆಯರಾಗಬೇಕು ಎಂಬುದೇ ಆಗಿದೆ. ಅದಕ್ಕೆ ಪ್ರತಿ ಉತ್ತರವಾಗಿ ಇಲ್ಲಿನ ಒಂದೊಂದು ಕಥಾರತ್ನಗಳು ಸ್ವಯಂ ನಮ್ಮನ್ನು ನಾವೇ ಹೇಗೆ ಉನ್ನತವಾದ ಮಟ್ಟಿಕ್ಕೆ ಏರಿಸಿಕೊಳ್ಳಬಹುದು ಎಂಬುದುನ್ನು ಸಾಬೀತು ಪಡಿಸುತ್ತವೆ. ಹಾಗಾಗಿ ಇವುಗಳು ನಮ್ಮ ತಪ್ಪು, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕುಬ್ಜತೆಯನ್ನು ಮನದಟ್ಟು ಮಾಡಿಕೊಡುವುದುರ ಜೊತೆಗೆ ಒಳ್ಳೆಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಒಳ್ಳೆಯ ಫಲವನ್ನು ಪಡೆಯಬಹುದು ಎಂಬುದನ್ನು ದೃಢಪಡಿಸುತ್ತವೆ.
ಈ ಹಿನ್ನೆಲೆಯಲ್ಲಿ ಜಾತಕ ಕಥೆಗಳನ್ನು ಧರ್ಮಗ್ರಂಥವೆಂದು ಅಂಗೀಕರಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ.
|
| |
|
|
|
|
|
|
|
|
|