|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ತಮ್ಮ ಸೃಜನಶೀಲ ಗದ್ಯ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದಿರುವ ದೇಶದ ಏಕೈಕ ಸಾಹಿತಿ `ಬೊಳುವಾರು ಮಹಮದ್ ಕುಂಞÂ’. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ತಂದಿತ್ತ ಮೊದಲಿಗರೂ ಇವರೇ. ಮಾತ್ರವಲ್ಲ, ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ `ಮುಸ್ಲಿಮ್ ಬದುಕನ್ನು’ ಪರಿಚಯಿಸಿದ ಮೊತ್ತಮೊದಲಿಗರೂ ಇವರೇ. ಇವರ ಮೊತ್ತಮೊದಲ ಕತೆಯಿಂದಲೂ ಬಲು ಹತ್ತಿರದಿಂದ ಗಮನಿಸುತ್ತಾ, ಬೆನ್ನುತಟ್ಟುತ್ತಾ ಬಂದಿರುವ ಟಿ. ಪಿ. ಅಶೋಕ ಅವರು, ಅಷ್ಟೇ ಆಸ್ತೆಯಿಂದ ಬೊಳುವಾರು ಅವರನ್ನು ಇಲ್ಲಿ ಪರಿಚಯಿಸಿದ್ದಾರೆ. ನಮ್ಮ `ನವಕರ್ನಾಟಕ ಪ್ರಕಾಶನ’ದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿದ್ದ ಸೃಜನಶೀಲ ಕನ್ನಡ ಕೃತಿಯೂ `ಬೊಳುವಾರು’ ಅವರ ಮೊತ್ತಮೊದಲ ಕಾದಂಬರಿಯೇ ಎಂಬುದು ನಮಗೂ ಅಭಿಮಾನ. ಅದೇ ಪ್ರೀತಿಯಿಂದ ಅವರ ಮೊತ್ತಮೊದಲ ಪರಿಚಯಾತ್ಮಕ ಕೃತಿಯನ್ನೂ ಪ್ರಕಟಿಸುತ್ತಿದ್ದೇವೆ.
ಕೃತಿಯ ಲೇಖಕ ಪ್ರೊ. ಟಿ. ಪಿ. ಅಶೋಕ ಕನ್ನಡದ ವಿಮರ್ಶಕರಲ್ಲಿ ಅಗ್ರಗಣ್ಯರು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪÀÅಸ್ತಕ ಬಹುಮಾನ ಪಡೆದಿದ್ದಾರೆ. ಗೋವಿಂದ ಪೈ ಸಂಶೋಧನಾ ಕೇಂದ್ರದ ಇನಾಂದಾರ್ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ ಮಾತ್ರವಲ್ಲದೇ ಸಾಹಿತ್ಯ ವಿಮರ್ಶೆಯ ಕ್ಷೇತ್ರದ ಸಾಧನೆಗಾಗಿ 2016ರ ಮಾಸ್ತಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸಾಹಿತ್ಯ - ರಂಗಭೂಮಿ - ಚಲನಚಿತ್ರ ಕುರಿತಂತೆ ಇವರು ನಡೆಸಿದ ಶಿಬಿರಗಳು 350 ಮೀರಿದ್ದು ಇಲ್ಲಿಯೂ ಪ್ರಶಸ್ತಿ
ಗೌರವಗಳು ಲಭ್ಯವಾಗಿವೆ.
|
| |
|
|
|
|
|
|
|
|
|