|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
104 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189679 |
ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಇತಿಹಾಸವನ್ನು ವೈಜ್ಞಾನಿಕ ನೆಲೆಯಲ್ಲಿ ಅನ್ವೇಷಿಸುವ, ಹೊಸ ದೃಷ್ಟಿಕೋನದಲ್ಲಿ ನೋಡುವ ಕ್ರಮ ಇವರ ಕಥನದ ಹಿಂದಿದೆ. ಕಥೆಯನ್ನು ಕುತೂಹಲಕಾರಿಯಾಗಿ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ.
ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ‘ಭಿನ್ನಬಿಂಬ’ ಕೃತಿಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿರುವುದು ಅವರ ಈ ಬಗೆಯ ಪ್ರವೃತ್ತಿಯೇ. ಜೊತೆಗೆ ಧರ್ಮ ವಿಜ್ಞಾನಗಳನ್ನು ಕುರಿತ ತೌಲನಿಕ ಚರ್ಚೆ ಇಲ್ಲಿದೆ. ಚರಿತ್ರೆಯ ವಿಸ್ಮೃತಿಯ ಪರಿಣಾಮಗಳೇನೆಂಬುದನ್ನು ಅತ್ಯಂತ ಕುತೂಹಲದ ಧಾಟಿಯಲ್ಲಿ ನಿರೂಪಿಸುವ ‘ನಿಧಿಯ ಅವತರಣೆ’ ಲೇಖನವಿದೆ. ಎಲ್ಲ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಷ್ಟು ಪರಿಣಾಮಕಾರಿಯಾಗಿವೆ.
ವಿಜ್ಞಾನ, ಚರಿತ್ರೆ, ಧರ್ಮಗಳ ಮುಖಾಮುಖಿಯಲ್ಲಿ ತಿಳಿದುಕೊಳ್ಳಬೇಕಾದ ಸತ್ಯದ ಅನಾವರಣವನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಇಂಗ್ಲಿಷ್ನಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿರುವ ಗಣೇಶಯ್ಯ ಅವರ ಮೊದಲ ಆ ಸ್ವರೂಪದ ಕನ್ನಡದ ಕೃತಿ ಭಿನ್ನಬಿಂಬ.
|
| |
|
|
|
|
|
|
|
|
|