Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 85    
10%
Rs. 77/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ಕೋಡ್ : 187837

ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಯು.ಆರ್.ಅನಂತಮೂರ್ತಿಯವರ ನಾಲ್ಕನೆಯ ಕಾದಂಬರಿ ‘ಭವ’. ಈ ಕೃತಿಯ ಮೂಲಕ ಶ್ರೀಯುತರು ತಮ್ಮ ಸೃಜನಶೀಲ ಜೀವನದ ಹೊಸ ಘಟ್ಟವನ್ನು ಪ್ರವೇಶಿಸಿದ್ದಾರೆ. ಭವ ಎಂದರೆ ಇರುವಿಕೆಯೂ ಹೌದು, ಆಗುವಿಕೆಯೂ ಹೌದು. ಮೂರು ತಲೆಮಾರಿಗೆ ಸೇರಿದ ಮೂವರು ವ್ಯಕ್ತಿಗಳ ಮೂಲಕ ಅನಂತಮೂರ್ತಿ ತೀವ್ರ ಅನುರಕ್ತಿ ಮತ್ತು ವಿರಕ್ತಿ ಬೆಳೆಯುವ ಸಂಗಮಸ್ಥಾನವನ್ನು ಶೋಧಿಸಿದ್ದಾರೆ. ಇಲ್ಲಿಯ ನಾಯಕರೆಲ್ಲರೂ ಸಂಸಾರದ ಒಡಲೊಳಗೆ ತೀವ್ರವಾಗಿ ಮುಳುಗಿದ್ದೂ ನಿರ್ವಾಣಕ್ಕಾಗಿ ಹಂಬಲಿಸುವವರು. ಆದರೆ ಸರಿಯಾದ ದಾರಿ ಸಿಕ್ಕದೆ ಕಂಗಾಲಾದವರು. ವಿಶ್ವನಾಥ ಶಾಸ್ತ್ರಿಗಳಲ್ಲಿ ಪ್ರಾರಂಭವಾದ ಪ್ರಯಾಣ ಪ್ರಸಾದನಲ್ಲಿ ಸಾರ್ಥಕತೆ ಕಾಣುತ್ತದೆ. ಸಂಸಾರ-ನಿರ್ವಾಣಗಳ ನಡುವೆ ವ್ಯತ್ಯಾಸವೇ ಇಲ್ಲ ಎಂಬ ಘನವಾದ ಬೌದ್ಧ ದಾರ್ಶನಿಕ ಸತ್ಯವನ್ನು ತೀರ ಆಕರ್ಷಕವಾದ ಲೌಕಿಕ ರೀತಿಯಲ್ಲೇ ಕಾದಂಬರಿ ಮಂಡಿಸುತ್ತದೆ. ಉಪನಿಷತ್ ಸತ್ಯವೂ ಅದೇ ಇದ್ದೀತು. ಬಹುಮುಖಿ ಕಥನದ ದನಿಗಳಲ್ಲಿ ಈ ಕಾದಂಬರಿಯನ್ನು ಬರೆಯಲಾಗಿದೆ. ಒಮ್ಮೆ ಉತ್ಕಟ ಕೌತುಕದ ಕಥೆಯಾಗಿ, ಒಮ್ಮೆ ಅಂತರಂಗ ವಿಶ್ಲೇಷಣೆಯ ಪ್ರಜ್ಞಾವಾಹಿನಿಯಾಗಿ, ಒಮ್ಮೆ ನಿರ್ಲಿಪ್ತ ಸಾಕ್ಷಿಪ್ರಜ್ಞೆಯ ನಿರೂಪಣೆಯಾಗಿ, ಹೀಗೆ ಈ ಪುಟ್ಟ ಕೃತಿಯಲ್ಲಿ ಒಂದು ಎಪಿಕ್ ಕಾದಂಬರಿಯ ತಂತ್ರ ತುಂಬಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವನವನ್ನು ಪೊಳ್ಳು ನೈತಿಕ ಮೌಲ್ಯಗಳ ತೀರ್ಮಾನವೆನ್ನದೆ ಪ್ರೀತಿ ತುಂಬಿದ ವಿನಯವಾಗಿ ಇಲ್ಲಿ ಕಾಣಲಾಗಿದೆ.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
 
ನನ್ನ ಸಾಹಿತ್ಯದ ಐದು ....
ಅನಂತಮೂರ್ತಿ ಯು ಆರ್, Ananthamurthy U R
Rs. 50
10%
ಶತಮಾನದ ಕವಿ ರಿಲ್ಕೆ
ಅನಂತಮೂರ್ತಿ ಯು ಆರ್, Ananthamurthy U R
Rs. 50    Rs. 45
Best Sellers
ಇಗೋ ಕನ್ನಡ ಸಂಪುಟ - 3 (ಸಾಮಾಜಿಕ ನಿಘಂಟು)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 220/-   Rs. 275
ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 45/-   Rs. 50
ಬಾನು ಬೆಳಗಿತು - ತ್ರಿವೇಣಿ
ತ್ರಿವೇಣಿ , Triveni
Rs. 81/-   Rs. 85
ಚೆಲುವು ಒಲವು (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 45/-

Latest Books
ಮಹಿಳೆ ಮತ್ತು ಮೌಢ್ಯ
ವಸುಂಧರಾ ಭೂಪತಿ, Vasundhara Bhupathi
Rs. 99/-   Rs. 110
ಔಷದರಹಿತ ಬದುಕಿಗಾಗಿ ಕ್ರಿಯಾತ್ಮಕ ಯೋಗಾಸನಗಳು
ಸಿ ಒ ಚೇತನ್ ಕುಮಾರ್, C O Chetan Kumar
Rs. 117/-   Rs. 130
ಸಸ್ಯ ಸಗ್ಗ (ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳು)
ಗಣೇಶಯ್ಯ ಕೆ ಎನ್, Ganeshaiah K n
Rs. 315/-   Rs. 350
ಕರ್ನಾಟಕ ಪಾಲಿಟಿಕ್ಸ
ಸಿದ್ಧಾರ್ಥ ವಾಡೆನ್ನವರ, Siddhart Wadennavar
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.