|
|
|

| Rs. 175 | 10% |
Rs. 158/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೇಖಕರ ಮಾತು:- ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು ನಾನು ಆರೇಳು ವರ್ಷಗಳ ಕೆಳಗೇ (ಎಂದರೆ ನನ್ನ ವಸಾಹತೋತ್ತರ ಚಿಂತನೆ ಪ್ರಕಟವಾದ ಕೂಡಲೇ) ಬರೆಯಬೇಕೆಂದುಕೊಂಡಿದ್ದ ಕೃತಿ; ಆ ಕನಸು ಈಗ ನನಸಾಗುತ್ತಿರುವುದು ನನಗೆ ತುಂಬಾ ಹರ್ಷದ ಸಂಗತಿ. ಮುಂದುವರೆಯುವ ಮೊದಲು ಈ ಪುಸ್ತಕದ ಮಿತಿಯನ್ನೂ ನಾನು ಒಪ್ಪಿಕೊಳ್ಳಬೇಕು: ಕಳೆದ ಎರಡು-ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ-ಭಾರತೀಯ ವಿದ್ವದ್ವಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವೆಂದು ತೋರಿದ, ಕೆಲವು ಸೈದ್ಧಾಂತಿಕ ಧಾರೆಗಳನ್ನು ಮಾತ್ರ ಇಲ್ಲಿ ಪರಿಚಯಿಸಿದ್ದೇನೆ. ಭಾಷಾಂತರಕ್ರಿಯೆಯನ್ನು ಕುರಿತು ನನ್ನ ನಿಲುವು ಈ ಕೃತಿಯ ಎರಡನೆಯ ಭಾಗದ ಲೇಖನಗಳಲ್ಲಿ ಸ್ಪಷ್ಟವಾಗಿರುವುದರಿಂದ, ಭಿನ್ನ ಭಿನ್ನ ಸೈದ್ಧಾಂತಿಕ ನೆಲೆಗಳನ್ನು ವಿವರಿಸುವಾಗ ಸಾಧ್ಯವಿದ್ದಷ್ಟೂ ವಸ್ತುನಿಷ್ಠವಾಗಿರಲು ಪ್ರಯತ್ನಿಸಿದ್ದೇನೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ: ಮೊದಲ ಭಾಗದಲ್ಲಿ ಭಿನ್ನ ಸಿದ್ಧಾಂತಗಳ ಪರಿಚಯಾತ್ಮಕ ವ್ಯಾಖ್ಯಾನವಿದ್ದರೆ ಎರಡನೆಯ ಭಾಗದಲ್ಲಿ ಆಗಾಗ ಈ ವಿಷಯವನ್ನು ಕುರಿತು ಪ್ರಕಟವಾಗಿರುವ ನನ್ನ ಆನ್ವಯಿಕ ಲೇಖನಗಳಿವೆ.
|
| |
|
|
|
|
|
|
|
|
|