Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 165/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 204
ಪುಸ್ತಕದ ಗಾತ್ರ : 1/8 Demy Size
ಕೋಡ್ : 106360

‘ಭಾರತೀಪುರ‘, ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಚಿತ್ರ. ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಬಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾದಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ; ಆ ಸಮಾಜದ ಮೂರ್ತ-ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಯನ್ನು, ಮೌಲ್ಯಗಳನ್ನು ನಿರ್ಮಿಸುವುದು. ವ್ಯಕ್ತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಅತ್ಯಂತ ಅರ್ಥವತ್ತಾದ ವಿವರಪೂರ್ಣವಾದ ಕಥೆಯನ್ನು ನೇಯುತ್ತದೆ. ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕ ಅರಾಜಕತೆಯಿದೆ. ಅದರಲ್ಲಿ ಮಾರ್ಕ್ಸ್, ಸಾರ್ತ್ರೆ, ಲೋಹಿಯಾ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ. ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಾಮರ್ಥ್ಯ ಉಳ್ಲವರು.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
10%
ಮತ್ತೆ ಮತ್ತೆ ಬ್ರೆಕ್ಟ್
ಅನಂತಮೂರ್ತಿ ಯು ಆರ್, Ananthamurthy U R
Rs. 100    Rs. 90
10%
ಇಲ್ಲಿಯವರೆಗಿನ ಕವಿತೆಗಳು
ಅನಂತಮೂರ್ತಿ ಯು ಆರ್, Ananthamurthy U R
Rs. 120    Rs. 108
Rs. 650    Rs. 585
10%
ಕನ್ನಡ ಕಾವ್ಯ ಸಂಗ್ರಹ
ಅನಂತಮೂರ್ತಿ ಯು ಆರ್, Ananthamurthy U R
Rs. 55    Rs. 50
Best Sellers
ಮೆಂಟಲ್ ಎಬಿಲಿಟಿ (ವಸಂತ ಪ್ರಕಾಶನ)
ಆಂಜನಪ್ಪ ಎ ಎನ್, Anjanappa A N
Rs. 198/-   Rs. 220
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 117/-   Rs. 130
ಸಾಮಾನ್ಯ ಮರಗಳು (Common Trees)
ಸಂತಪು ಎಚ್, Santapu H
Rs. 54/-   Rs. 60
ಆಯುರ್ವೇದದಲ್ಲಿ ಬ್ಯೂಟಿ
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 225/-   Rs. 250

Latest Books
ಲಂಕೇಶ್ ಹೇಗಿದ್ದರು ?
ಹಾಲತಿ ಸೋಮಶೇಖರ್, Halati Somashekar
Rs. 144/-   Rs. 160
ಕ್ಯಾನ್ಸರನ್ನು ಗೆಲ್ಲುವ ಹಾದಿಯಲ್ಲಿ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 77/-   Rs. 85
ಶಿಲೆಗಳಲ್ಲಡಗಿದ ಸತ್ಯ
ಸದ್ಯೋಜಾತ ಭಟ್ಟ, Sadyojata Bhat
Rs. 225/-   Rs. 250
ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು)
ಪ್ರಸನ್ನ ಎ ಎನ್, Prasanna A N
Rs. 209/-   Rs. 220


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.