|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಹಾನ್ ವ್ಯಕ್ತಿಗಳ ಜೀವನ ಮತ್ತು ಕಾರ್ಯಚಟುವಟಿಕೆಗಳು ತಮ್ಮ ಗುರಿ ಸಾಧಿಸುವತ್ತ ಕೇಂದ್ರೀಕೃತವಾಗಿರುತ್ತವೆ. ಅವರದು ಗುರಿ ಸಾಧಿಸುವವರೆಗೆ ದಣಿವರಿಯದ ಕಾರ್ಯತತ್ಪರತೆ. ಈ ಕಾರಣದಿಂದ ಅವರು ಇತರರಿಗೆ ಸ್ಫೂರ್ತಿಯ ಸೆಲೆಯಾಗುತ್ತಾರೆ. ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊಫೆಸರ್ ವೇಣು ಬಾಪು ಅಂಥ ಅಪರೂಪದ ಮಹನೀಯರಲ್ಲೊಬ್ಬರು. ನಾನು ನನ್ನ ತಂದೆಯ ತೊಡೆಯ ಮೇಲೆ ಕುಳಿತು ಖಗೋಳ ವಿಜ್ಞಾನ ಕಲಿತೆ ಎಂದು ಹೇಳುವ ಅವರು, ವಿಜ್ಞಾನಿಯ ಕಣ್ಣಿನಿಂದ ಆಕಾಶ, ನಕ್ಷತ್ರಗಳು, ಸೂರ್ಯೋದಯ, ಚಂದ್ರೋದಯಗಳ ವೀಕ್ಷಣೆಯಲ್ಲಿ ಸಾಕ್ಷಾತ್ಕಾರ ಕಂಡವರು. ಖಗೋಳ ವಿಜ್ಞಾನಿಯಾಗಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡಿದವರು. ಕಾವಲೂರಿನಲ್ಲಿರುವ ವೇಣು ಬಾಪು ದೂರದರ್ಶಕ ಕೇಂದ್ರ ಅವರ ಕನಸಿನ ಸಾಕಾರ ರೂಪ. ಪ್ರೊ|| ವೇಣು ಬಾಪು ಅವರ ಬದುಕು ಮತ್ತು ಸಾಧನೆಗಳನ್ನು ಡಾ|| ಎಂ. ಎಸ್. ಎಸ್. ಮೂರ್ತಿಯವರು ಇಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.
|
ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
|
|
| |
|
|
|
|
|
|
|
|
|