|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184673777 |
ಕೋಡ್ |
: |
002144 |
ಬಹುಮುಖ ಪ್ರತಿಭೆ, ಕ್ರಿಯಾಶಾಲಿ ವ್ಯಕ್ತಿತ್ವ, ಪ್ರಾಚೀನ ಭಾರತದ ಇತಿಹಾಸದಲ್ಲಿನ ಅಗಾಧ ಪಾಂಡಿತ್ಯ ಎಲ್ಲ ಸೇರಿ ಎಸ್. ಜಿ. ಸರ್ದೇಸಾಯಿಯವರನ್ನು ಬಹು ಎತ್ತರದ ಸ್ಥಾನದಲ್ಲಿ ಇರಿಸಿದೆ. ಈ ಕೃತಿಯು ಪ್ರಾಚೀನ ಭಾರತೀಯ ಸಂಸ್ಕೃತಿಯ ಆಚರಣಾ ವಿಧಾನಗಳನ್ನು ವೇದಪೂರ್ವ ವೇದೋತ್ತರ ಮತ್ತು ಉಪನಿಷತ್ತಿನ ಕಾಲದ ವ್ಯಾಪ್ತಿಯಲ್ಲಿ ವಿಮರ್ಶೆಗೊಳಪಡಿಸಿದ ಒಂದು ಅಪೂರ್ವ ಇತಿಹಾಸದರ್ಶನ. ಕಾಲದಿಂದ ಕಾಲಕ್ಕೆ ಪಲ್ಲಟಗೊಂಡು ಪರಸ್ಪರ ವೈರುಧ್ಯ-ವಿಲಕ್ಷಣ ಸ್ವಭಾವಗಳನ್ನು ತೋರ್ಪಡಿಸಿ ಜನಜೀವನದ ಭಾಗವಾಗಿಯೇ ಉನ್ನತಿ-ಅವನತಿಗಳನ್ನು ಕಂಡ ಎಷ್ಟೋ ಆಚರಣೆಗಳು ಪೂರ್ವಕಾಲದಲ್ಲಿದ್ದವು. ನವನವೀನ ಸಿದ್ಧಾಂತಗಳು ವಿಕಾಸಗೊಳ್ಳುತ್ತ ಹೊಸ ಹೊಸ ಕಲ್ಪನೆಗಳು ಗರಿಗೆದರುತ್ತ ಸಾಗಿದ ವೇದಕಾಲೀನ ಸಂಸ್ಕೃತಿ ಇಲ್ಲಿ ಪರಿಚಯಿಸಲ್ಪಟ್ಟಿದೆ. ಬೇಟೆಯ ಹಂತದಿಂದ ಕೃಷಿಯ ಹಂತಕ್ಕೆ ತಲುಪಿದ ಮಾನವನಿಗೆ ಫಲವತ್ತಾದ ಭೂಮಿಯಲ್ಲಿ ಬೆಳೆಯುವುದೆಲ್ಲ ಯಾರದೋ ಕೃಪೆಯಿಂದ ಎಂಬ ನಂಬಿಕೆ ಬೆಳೆಯಿತು. ಕೃತಜ್ಞತೆಗಾಗಿ ಪೂಜೆ-ಪ್ರಾರ್ಥನೆ-ಯಜ್ಞ-ಯಾಗ-ಬಲಿ ಮುಂತಾದ ಆಚರಣೆಗಳು ರೂಢಿಗೆ ತಂದ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಹೊಸ ಆಚರಣೆ-ಸಿದ್ಧಾಂತಗಳು ರೂಪುಗೊಂಡವು. ಹೊಸತು ಹಳೆಯದನ್ನು ಹಿಂದಿಕ್ಕಿ ಮುಂದೊಂದು ದಿನ ತಾನೂ ಹಳೆಯದಾಗುವುದು ನಿರಂತರವಾದದ್ದು. ಕಾಲದ ಪ್ರವಾಹಕ್ಕೆ ಬೆಲೆಯುಳ್ಳವು-ನಗಣ್ಯವಾದವು ಎಂಬ ಭೇದ ಇಲ್ಲ. ಕೊಚ್ಚಿ ಹೋದುವಕ್ಕೆ ನಾವು ದಡದಲ್ಲಿ ನಿಂತು ಬೆಲೆ ಕಟ್ಟುತ್ತಿರುತ್ತೇವೆ. ಸಾಕಷ್ಟು ಬದಲಾವಣೆ ಹೊಂದಿದ ಸಂಸ್ಕೃತಿಗಳು ಇಂದು ನಮ್ಮ ಮುಂದಿವೆ. ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಓದಿನೋಡಿ - ಎಸ್. ಜಿ. ಸರ್ದೇಸಾಯಿಯವರ ಆಳವಾದ ಇತಿಹಾಸದ ಪಾಂಡಿತ್ಯವನ್ನು - ಅಂತೆಯೇ ಪ್ರಜ್ಞಾಪ್ರವಾಹದ ಭೋರ್ಗರೆತವನ್ನು !
|
| | |
|
|
|
|
|
|
|
|