|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಹಿಂದಿ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
232 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184673531 |
ಕೋಡ್ |
: |
002116 |
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಕೇವಲ ರಾಷ್ಟ್ರೀಯ ಪಕ್ಷಗಳ ನೇತಾರರಷ್ಟೇ ಅಲ್ಲ; ಅವರೊಂದಿಗೆ ಸರಿ-ಮಿಗಿಲಾಗಿ ಇತರ ಪ್ರಜೆಗಳೂ ಹಲವು ರೀತಿಯಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲರ ಗುರಿಯೂ ಪರಕೀಯರ ಆಡಳಿತದಿಂದ ಮುಕ್ತರಾಗುವತ್ತ ಕೇಂದ್ರೀಕೃತವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು, ಸಂಘಸಂಸ್ಥೆಗಳು ತಂತಮ್ಮ ಮಿತಿಯಲ್ಲಿ ದೇಶಪ್ರೇಮವನ್ನು ಮೆರೆದಿದ್ದಾರೆ. ಮುಸ್ಲಿಂ ಮಹಿಳೆಯರೇನೂ ಈ ಹೋರಾಟದಲ್ಲಿ ಪಾಲ್ಗೊಳ್ಳಲು ಹಿಂದು ಮುಂದು ನೋಡಿಲ್ಲ. ಈ ಕೃತಿಯಲ್ಲಿ ಪರಿಚಯಿಸಲಾದ ಮುಸ್ಲಿಂ ಮಹಿಳೆಯರ ಸಂಖ್ಯೆ ಮತ್ತು ಅವರ ಹೋರಾಟಗಳನ್ನು ನೋಡಿದಾಗ ನಾವು ಖಂಡಿತ ಬೆರಗಾಗುತ್ತೇವೆ. ಅಂದಿನ ಕಾಂಗ್ರೆಸ್ ನೇತಾರರೊಂದಿಗೆ ತಮ್ಮನ್ನು ಗುರುತಿಸಿಕೊಂಡು ಈ ಮಹಿಳೆಯರು ತಮ್ಮ ದಿಟ್ಟತನದಿಂದ ತಾವು ಯಾರಿಗೂ ಕಡಿಮೆಯಿಲ್ಲವೆಂಬಂತೆ ಶಕ್ತಿ-ಸಾಮರ್ಥ್ಯಗಳನ್ನು ತೋರ್ಪಡಿಸಿದ್ದಾರೆ. ಅತಿಕಷ್ಟದಿಂದ ಲೇಖಕರು ಈ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸಿಕೊಟ್ಟಿದ್ದಾರೆ.
|
ಡಾ|| ಆಬಿದಾ ಸಮೀಉದ್ದೀನ ಆಲಿಘಡದ ಮುಸ್ಲಿಂ ವಿಶ್ವವಿದ್ಯಾಲಯದ ಪೊಲಿಟಿಕಲ್ ಸೈನ್ಸ್ ವಿಭಾಗದ ರೀಡರ್ ಆಗಿದ್ದು ನಿವೃತ್ತರು. ಈ ಕೃತಿ ರಚನೆಗೆ ಬೇಕಾದ ಆಕರಗಳನ್ನು ಲೈಬ್ರರಿಗಳಿಂದ ಮಾತ್ರವಲ್ಲದೆ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಕಲ್ಕತ್ತದಿಂದ ಹೊರಡುತ್ತಿದ್ದ ಜಮ್ಹುರ್ ಹಾಗೂ ಮದೀನ ಪತ್ರಿಕೆಯ ಹಳೆಯ ಕಡತಗಳಿಂದ ಸಂಗ್ರಹಿಸಿದ್ದಾರೆ. ಸಂಬಂಧಪಟ್ಟವರ ಸಂದರ್ಶನ ಹಾಗೂ ಪತ್ರ ವ್ಯವಹಾರಗಳಿಂದಲೂ ಅಮೂಲ್ಯ ಮಾಹಿತಿ ಕಲೆ ಹಾಕಿದ್ದಾರೆ. ಇಂಗ್ಲಿಷಿನಲ್ಲಿ ಇವರು ಸುಮಾರು ಎಂಟು ಪುಸ್ತಕಗಳನ್ನು ಬರೆದಿದ್ದು, ಫ್ರೆಂಚ್, ಜರ್ಮನಿ, ಅರೆಬಿಕ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ.
|
|
| | |
|
|
|
|
|
|
|