|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಾಸನ್ ಪಬ್ಲಿಕೇಷನ್ಸ್, Vasan Publications |
ಈಗಿನ ಮುದ್ರಣದ ಸಂಖ್ಯೆ |
: |
6 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
320 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789350261675 |
ಕೋಡ್ |
: |
187621 |
ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ೨೦೦೨ರಿಂದ ೨೦೦೭ರ ವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿದ್ದರು. ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದವರು. ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರದ್ಲ ಜನಿಸಿದ ಡಾ. ಕಲಾಂ ಅವರು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತರು. ಭಾರತವನ್ನು ಬಾಹ್ಯಾಕಾಶ ಯಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದ ರೋಹಿಣಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಎಸ್ಎಲ್ವಿ-೩ ರಾಕೆಟ್ ಉಡಾವಣಾ ವಾಹನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸುವುದರಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದರು. ಭಾರತದ ಯುದ್ಧಾನುಕೂಲದ ಕ್ಷಿಪಣಿ ವ್ಯವಸ್ಥೆಗಳ ರಚನೆಯಲ್ಲೂ ಅವರದೇ ಪ್ರಧಾನ ಪಾತ್ರ, ಹಾಗೂ ೧೯೯೮ರ ಪರಮಾಣು ಸರಣಿ ಪರೀಕ್ಷೆಗಳಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ತಂತ್ರಜ್ಞಾನ ಮಾಹಿತಿ, ಭವಿಷ್ಯಗ್ರಹಣ ಹಾಗೂ ಅಂದಾಜು ಮಂಡಯ (ಟೆಕ್ನಾಲಜಿ ಇನ್ಫರ್ಮೇಷನ್, ಫೋರ್ಕಾಸ್ಟಿಂಗ್ ಅಂಡ್ ಅಸೆಸ್ಮೆಂಟ್ ಕೌನ್ಸಿಲ್ - ಟಿಐಎಫ್ಎಸಿ) ಅಧ್ಯಕ್ಷರಾಗಿ ಹಾಗೂ ಓರ್ವ ಗಣ್ಯ ವಿಜ್ಞಾನಿಯಾಗಿ ೫೦೦ ಮಂ ತಜ್ಞರ ಸಹಾಯದೊಂಗೆ ಅವರು ೨೦೨೦ರ ತಂತ್ರಜ್ಞಾನ ಕಾಣ್ಕೆಯನ್ನು ರೂಪಿಸಿದರು. ಇದು ಭಾರತವನ್ನು ಒಂದು ಮುಂದುವರಿದ ರಾಷ್ಟ್ರವಾಗಿ ರೂಪಿಸುವುದಕ್ಕೆ ಮಾರ್ಗೋಪಾಯಗಳನ್ನೂ ನೀಲಿನಕ್ಷೆಯನ್ನೂ ಹಾಕಿಕೊಟ್ಟಿತು. ಸಲಹೆ ಕೊಡುತ್ತ, ಜನರೊಡನೆ ಸಂಪರ್ಕ ಬೆಳೆಸುತ್ತ ಮತೀಯ ಹಾಗೂ ಸಾಮಾಜಿಕ ವೈಷಮ್ಯಗಳು ನಿರ್ಮಾಣವಾದಲ್ಲೆಲ್ಲ ಅವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತ ಕಲಾಂ ಅವರು ಇಂದು ಸಾಮಾಜಿಕ ಕ್ಷೇತ್ರಗಳಲ್ಲೂ ಜನ ಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಭಾರತವನ್ನು ೨೦೨೦ರ ವೇಳೆಗೆ ಮುಂದುವರಿದ ರಾಷ್ಟ್ರವಾಗಿ ರೂಪಿಸುವ ಕನಸನ್ನು ಅವರು ಎಡೆಬಿಡದೆ ಹಿಂಬಾಸಿದ್ದಾರೆ. ಇದಕ್ಕಾಗಿ ಅವರು ದೇಶಾದ್ಯಂತ ಸುತ್ತಿ ಕಮ್ಮಟಗಳಲ್ಲೂ ಸೆಮಿನಾರುಗಳಲ್ಲೂ ಭಾಗವಹಿಸಿ ತಜ್ಞರನ್ನೂ ಯುವ ಜನಾಂಗದವರನ್ನೂ ಹುರಿದುಂಬಿಸುತ್ತಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಐಐಟಿ ಮತ್ತು ಐಐಎಂಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
|
|
| | |
|
|
|
|
|
|
|
|