|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
160 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381119914 |
ಕೋಡ್ |
: |
165018 |
‘Marriages are made in heaven’ ಅಂದರೆ ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ಮಾತೊಂದಿತ್ತು. ಆದರೆ ಈಗ ವಧು-ವರರ ಮಾಹಿತಿ ಕೇಂದ್ರ, ಆನ್ಲೈನ್ ಮ್ಯಾರೇಜ್ ಬ್ಯೂರೋಗಳ ಮೂಲಕ ಮದುವೆಗಳು ನಡೆಯುತ್ತೆ. ವಿವಾಹವೆನ್ನುವ ಕಲ್ಪನೆ ಯುವ ಜನತೆಯಲ್ಲಿ ಬೇರೆ ರೂಪ ತಾಳುತ್ತಿದೆಯ? ಹೌದು, ಅನ್ನಲೇ ಬೇಕಿದೆ. ಒಂದು ಮಾಹಿತಿ ಪ್ರಕಾರ ವಿವಾಹವಾಗುತ್ತಿರುವವರ ಸಂಖ್ಯೆಗಿಂತ ವಿಚ್ಛೇದಿತರ ಸಂಖ್ಯೆ ಹೆಚ್ಚಾಗುತ್ತಿದೆ! ಇದಕ್ಕೆ ಕಾರಣವೇನು? ಯುವ ಜನತೆ ಹೆಚ್ಚು ಪ್ರಬುದ್ಧರಾಗುತ್ತಿರುವುದು ಕಾರಣವಾ? ಕಾರನದ ಪಟ್ಟಿ ದೊಡ್ಡದಾಗಬಹುದು.
ನಾನು ‘ಭಾವ ಸರೋವರ’ ಕಾದಂಬರಿ ಬರೆದಾಗ ‘ಹಕ್ಕು, ಅಧಿಕರ ಇಲ್ಲದ ಜೊತೆಗಾರ’ನ ಜೊತೆ ವಾಸಿಸುವುದು ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಈಗ ‘ಲಿವಿಂಗ್-ಟು-ಗೆದರ್’, ‘ಲೀವ್-ಇನ್-ರಿಲೇಷನ್’ - ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಆಗ ಇಂಥ ಸಂಬಂಧ, ತಾಯ್ತನ ತಪ್ಪಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|