|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪ್ರಪಂಚದಲ್ಲಿ ಕೆಲವು ಪ್ರದೇಶಗಳು ಮೈ ನವಿರೇಳಿಸುವಂಥ ರಹಸ್ಯಗಳ ಅಕ್ಷಯ ಪಾತ್ರೆಗಳಾಗಿವೆ. ಉತ್ತರ ಅಮೆರಿಕಾದ ಬರ್ಮುಡಾ ಟ್ರ್ಯಾಂಗಲ್, ಜಪಾನಿನ ಡ್ರೇಗನ್ ಟ್ರ್ಯಾಂಗಲ್ ಅಥವಾ ಡೆವಿಲ್ಸ್ ಸೀ, ಮೆಕ್ಸಿಕೋದ ಸೈಲೆಂಟ್ ಜೋನ್ ಇಲ್ಲೆಲ್ಲಾ ನಿರಂತರವಾಗಿ ಸಂಭವಿಸುತ್ತಿರುವ ಅಸಾಧಾರಣ ಹಾಗೂ ರಹಸ್ಯಮಯ ಘಟನೆಗಳು ವಿಜ್ಞಾನಕ್ಕೆ ಬಿಡಿಸಲಾರದ ಒಗಟುಗಳಾಗಿವೆ. ನಮಗೆ ಅರ್ಥವಾಗದುದು ಸುಳ್ಳು ಎಂದು ಅಲ್ಲಗಳೆಯುವುದು ವಿಜ್ಞಾನಕ್ಕೆ ಅಪಚಾರ ಮಾಡಿದಂತೆ. ಎಲ್ಲವೂ ಗೊತ್ತಿರುವ ಸುಪರಿಚಿತ ಪ್ರಪಂಚ ಒಂದರಲ್ಲಿ ಕ್ಷೇಮವಾಗಿ ಬಾಳಿಬದುಕುವ ಆಸೆ ಎಲ್ಲರಲ್ಲಿಯೂ ಇರುವಂತೆಯೇ ನೂತನ ಅಪರಿಚಿತ ದಿಗಂತಗಳನ್ನು ಅರಿಯುವ, ಅನ್ವೇಷಿಸುವ ಆಸೆಯೂ ಸಹ ಎಲ್ಲರಲ್ಲಿ ಇರುತ್ತದೆ. ಆದ್ದರಿಂದಲೇ ಕನ್ನಡ ನಾಡಿನ ಓದುಗರಿಗೆ ಬರ್ಮುಡಾ ಟ್ರ್ಯಾಂಗಲಿನ ವಿಚಿತ್ರ ಘಟನೆಗಳನ್ನೂ, ಅಲ್ಲಿನ ಅದೃಶ್ಯ ಶಕ್ತಿಗಳ ದಿಗಿಲಿಕ್ಕಿಸುವ ಪ್ರಭಾವಗಳನ್ನು ಪರಿಚಯಿಸುವ ಸಾಹಸಕ್ಕೆ ಶ್ರೀ ಪ್ರದೀಪ ಕೆಂಜಿಗೆಯವರು ಕೈ ಹಾಕಿದ್ದಾರೆ. ಬರ್ಮುಡಾ ಟ್ರ್ಯಾಂಗಲಿನ ಬಗ್ಗೆ ಈವರೆಗೆ ಬಂದಿರುವ ಗ್ರಂಥ ರಾಶಿಯನ್ನೆಲ್ಲಾ ಅಭ್ಯಾಸ ಮಾಡಿ ಅದನ್ನೆಲ್ಲಾ ಸರಳ ಸುಲಲಿತ ಕನ್ನಡದಲ್ಲಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಮೊದಲಿನಿಂದ ಕೊನೆಯವರೆಗೆ ಅವರು ವಹಿಸಿರುವ ವೈಜ್ಞಾನಿಕ ತಾಟಸ್ಥ್ಯ ಓದುಗರಿಗೆ ಇದನ್ನು ಓದಿ ತಮ್ಮದೇ ಆದ ಧೋರಣೆ ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ಪ್ರೇರೇಪಣೆಯನ್ನೂ ನೀಡುತ್ತದೆ.
|
| |
|
|
|
|
|
|
|
|