|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೊಸತು ಪತ್ರಿಕೆಯ ಪ್ರಾರಂಭದಿಂದ ಐದು ವರ್ಷಗಳ ಅರವತ್ತು ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದಕೀಯ ಸೇರಿದಂತೆ ವಿಷಯವಾರಾಗಿ ವಿಂಗಡಿಸಿ ಹದಿನೆಂಟು ಸಂಪುಟಗಳಲ್ಲಿ ಹೊಸತು ವಾಚಿಕೆ ರೂಪದಲ್ಲಿ ಓದುಗರಿಗೆ ನವಕರ್ನಾಟಕ ನೀಡುತ್ತಿದೆ. ಬಿ.ಎಸ್. ಶೈಲಜಾ ಅವರು ಬಾನಿಗೊಂದು ಕೈಪಿಡಿ ಸಂಪುಟವನ್ನು ಸಂಪಾದಿಸಿಕೊಟ್ಟಿದ್ದಾರೆ. ಹೊಸತು ಪ್ರಾರಂಭದ ಸಂಚಿಕೆಯಿಂದಲೂ ನಭಾವಲೋಕನ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ.
|
ಶ್ರೀಮತಿ ಬಿ ಎಸ್ ಶೈಲಜಾ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಅತಿ ಹೆಚ್ಚು ಉಷ್ಣತೆಯ ಯಮಳ ನಕ್ಷತ್ರಗಳ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ‘ಹೊಸತು’ ಪತ್ರಿಕೆಯ ಪ್ರಾರಂಭದಿಂದಲೂ ‘ನಭಾವಲೋಕನ’ ಅಂಕಣ ಬರೆಯುತ್ತಿದ್ದಾರೆ. ಖಗೋಳ್ ವಿಜ್ಞಾನಕ್ಕೆ ಸಂಬಂಧಿಸಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇವರ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘Chintamani Ragoonatha Charry and Contemporary Indian Astronomy’ ‘ಏನು...? ಗಣಿತ ಅಂದ್ರಾ...?’ ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ. ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ.
|
|
| |
|
|
|
|
|
|
|
|
|