|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂದಿನ ಪ್ರಪಂಚ ಅನುಭೋಗಾತಿರೇಕ (consumerism) ಎಂಬ ತೀವ್ರಜ್ವರಗ್ರಸ್ತವಾಗಿದೆ. ಋಣಂಕೃತ್ವಾ ಘೃತಂಪಿಬೇತ್ - ಈ ಅನುಕೂಲ ಸೂತ್ರದ ಕರಾಳಮುಖವಿದು. ಸರಕು ಸೇವೆಗಳ ಮಿತಿರಹಿತ ಅನುಭೋಗವೇ ನಿಜ ಪ್ರಗತಿಯ ಮಾನಕ ಎಂಬ ಭ್ರಮೆಯ ಅಮಲಿನಿಂದ ನಾವಿಂದು ತೂರಾಡುತ್ತಿದ್ದೇವೆ. ಸರಳ ಜೀವನ, ಗಹನ ಚಿಂತನ ಎಂಬ ದಿವ್ಯಾದರ್ಶವೀಗ ಕುಜೀವನ, ನಚಿಂತನ ಎಂಬುದಾಗಿ ವಿಪರ್ಯಯಿಸಿದೆ. ಕಾರಣವೇನು ? ಮೊದಲು, ಮಾನವ ತಂತ್ರವಿದ್ಯೆಯನ್ನು (technology) ರೂಪಿಸಿ, ಪಳಗಿಸಿ ಅದರ ನೆರವಿನಿಂದ ಬದುಕಿನಲ್ಲಿ ಹಲವಾರು ಸೌಕರ್ಯಗಳನ್ನು ಗಳಿಸಿದ. ನಿಸರ್ಗದಿಂದ ಪಡೆದ/ಬಗೆದ/ದೋಚಿದ/ಕಬಳಿಸಿದ ಪದಾರ್ಥಗಳ ಮೇಲೆ ನೈಸರ್ಗಿಕ ನಿಯಮಗಳನ್ನು ವ್ಯವಸ್ಥಿತವಾಗಿ ಅನ್ವಯಿಸಿ ಉಪಯುಕ್ತ ಸರಕು ಸೇವೆಗಳನ್ನು ಸೃಷ್ಟಿಸುವ ಕ್ರಿಯಾವಿಧಾನವೇ ತಂತ್ರವಿದ್ಯೆ. ಇದರ ಆಹಾರ ಶಕ್ತಿ. ನಾಗರಿಕತೆಯ ವಿಕಾಸ, ತಂತ್ರವಿದ್ಯೆಯ ಅಭಿವರ್ಧನೆ ಮತ್ತು ಶಕ್ತಿಯ ಅಧಿಕ ವಿನಿಯೋಗ ಪರಸ್ಪರ ಕೊಕ್ಕೊಡುತ್ತ ವರ್ತಮಾನದ ಸರ್ವಂ ತಂತ್ರವಿದ್ಯಾಮಯಂ ಸ್ಥಿತಿ ತಲುಪಿವೆ. ಇದರ ಜೊತೆ ಅನಿವಾರ್ಯವಾಗಿ ತಳಕು ಹಾಕಿಕೊಂಡಿರುವ ಒಂದು ಹಾಲಾಹಲವೂ ಇದೆ: ಪರಿಸರ ಮಾಲಿನ್ಯ. ಈ ಎಲ್ಲ ವಿಷಯಗಳನ್ನೂ ವಿಜ್ಞಾನದ ಜ್ಞೇಯನಿಷ್ಠ (objective) ಪಾತಳಿಯಲ್ಲಿ ಅತ್ಯಂತ ಕಳಕಳಿಯಿಂದ ಚರ್ಚಿಸಿ ವಿವೇಕಯುತ ವ್ಯಾವಹಾರಿಕ ಪರಿಹಾರವನ್ನು ಸೂಚಿಸುವ ಅಮೂಲ್ಯ ಪುಸ್ತಕವೇ ಬೈಜಿಕ ವಿದ್ಯುತ್ತು.
|
| |
|
|
|
|
|
|
|
|
|