Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Demy Size
ISBN : 9789389308754
ಕೋಡ್ : 003614

ಸಾಗರದ ಜೈಹಿಂದ್ ಬೇಕರಿಯ ಶೇಷಗಿರಿಯಪ್ಪನವರ ಮಗಳು ಮಾಲತಿಯನ್ನು ನಾನು ಮೊದಲು ನೋಡಿದ್ದು ಯಾವಾಗ ಎಂಬುದು ನನ್ನ ನೆನಪಿನಲ್ಲಿ ಇಲ್ಲ. ಇದಕ್ಕೆ ಕಾರಣ ಮಾಲತಿ ಸಾಗರದವರು, ನಾನೂ ಸಾಗರದವನೇ. ಆದರೆ ಅದು ಗುರುತು ಪರಿಚಯ ಹಿಡಿದು ಮಾತಾಡಿಸುವ ವಯಸ್ಸಾಗಿರಲಿಲ್ಲ. ನಮಗೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಈ ಜೈಹಿಂದ್ ಬೇಕರಿ ಇತ್ತು. ಇದಕ್ಕೆ ಈ ಹೆಸರನ್ನು ಇಡಲು ಕೂಡ ತಕರಾರು ನಡೆದಿತ್ತಂತೆ. ಊರು ಸಣ್ಣದಾಗಿದ್ದರಿಂದ ಇದು ದೊಡ್ಡ ಸುದ್ದಿ ಆಗದೇ ಹೋಗಿರಬಹುದು. ಹೀಗೆಯೇ ಮಾಲತಿ ಕೂಡ ಸಾಗರದ ಸಾವಿರ ಜನರಲ್ಲಿ ಒಬ್ಬರಾಗಿ ನಾವು ವಿಶೇಷವಾಗಿ ಗಮನಿಸದೇ ಹೋಗಿರಬಹುದು. ಆದರೂ ಅವರು ಕಾಲೇಜಿನಲ್ಲಿ ಓದುವಾಗ ನೋಡಿದ ನೆನಪು. ನಾನಾಗ ಕಾರ್ಗಲ್ಲಿನಲ್ಲಿ ಇದ್ದುದರಿಂದ ಸಾಗರದ ಭೇಟಿ ವಾರಕ್ಕೊಮ್ಮೆ ಅನ್ನುವ ಹಾಗಿತ್ತು.

ಆದರೆ ಮಾಲತಿ ನಿಜಕ್ಕೂ ನನ್ನ ಗಮನಕ್ಕೆ ಬಂದದ್ದು ಶ್ರೀ ಪ್ರಸನ್ನ ಅವರನ್ನ ಮದುವೆ ಆಗಿದ್ದಾರೆ ಅಂದಾಗ. ಜಾತಿ ಬೇರೆ, ಮನೆ ಮಾತು ಬೇರೆ. ಇಂತಹಾ ಮದುವೆಗಳು ನಡೆಯಬೇಕು ಅನ್ನುವಾಗ ಈ ಕಾರಣದಿಂದಲೇ ನನ್ನಂತಹವನಿಗೆ ಸಂತಸ ಆಗಿದ್ದು ನಿಜ. ಆದರೆ ಹೊಂದಾಣಿಕೆಯ ಪ್ರಶ್ನೆಯೋ, ಇಲ್ಲ ಅಪಾರ್ಥದ ಪ್ರಶ್ನೆಯೋ, ಈ ಮದುವೆ ವಿಚ್ಛೇದನದಲ್ಲಿ ತನ್ನ ಅಂತ್ಯ ಕಂಡಿತು ಎಂದಾಗ ಮನಸ್ಸಿಗೆ ಕಸಿವಿಸಿ ಆಗಿದ್ದು ನಿಜ. ಈ ನಡುವೆ ಮಾಲತಿ ಸಾಗರದಲ್ಲಿ ಇರಲಿಲ್ಲ. ಅವರು ಬೆಂಗಳೂರು, ದೆಹಲಿ ಎಂದು ತಿರುಗಾಡಿಕೊಂಡು ಇದ್ದರು.

ಒಂದು ದಿನ ಹೆಗ್ಗೋಡಿಗೆ ಹೋಗುವ ಬಸ್ಸನ್ನು ಏರಲೆಂದು ನಾನು ಸಾಗರದ ಬಸ್‌ನಿಲ್ದಾಣಕ್ಕೆ ಬಂದಾಗ ಯಾರೋ ನನಗೆ ಮಾಲತಿಯ ಪರಿಚಯ ಮಾಡಿಕೊಟ್ಟರು. ಆಕೆ ಬದಲಾಗಿದ್ದರು. ಪ್ರೌಢರಾಗಿದ್ದರು. ಅತ್ಯಾಧುನಿಕ ಅನ್ನುವ ಉಡುಪು ಧರಿಸಿದ್ದ ಮಾಲತಿ ಆಕರ್ಷಕವಾಗಿ ಕಂಡರು. ಅವರ ಜೊತೆ ನಾನು ಮಾತನಾಡಿಕೊಂಡು ಹೆಗ್ಗೋಡಿನವರೆಗೂ ಹೋದ ನೆನಪು. ನಂತರ ಮಾಲತಿ ನನಗೆ ಹತ್ತಿರದವರಾದರು.

ಲೇಖಕರ ಇತರ ಕೃತಿಗಳು
10%
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 150    Rs. 135
Best Sellers
ಶಿವರಾಮ ಕಾರಂತ (ಜೀವನ ಮತ್ತು ಸಾಧನೆ)
ಮಾಲಿನಿ ಮಲ್ಯ, Malini Mallya
Rs. 99/-   Rs. 110
ಇರುವುದೆಲ್ಲವ ಬಿಟ್ಟು.....
ಪ್ರಕಾಶ್ ರೈ, Prakash Rai
Rs. 135/-   Rs. 150
ಹಿಂದಿ ಇಂಗ್ಲಿಷ್ ಕನ್ನಡ ನಿಘಂಟು
ರಾಜು ಎಂ ಎ, Raju M A
Rs. 158/-   Rs. 175
ಪ್ರೇಮಭಿಕ್ಷು - ಕಾದಂಬರಿ
ಪ್ರಭುಶಂಕರ, Prabhushankara
Rs. 68/-   Rs. 75

Latest Books
ಫಾಲೋಯಿಂಗ್ ಫಿಶ್ : ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟ
ಸಮಂತ್ ಸುಬ್ರಮಣಿಯನ್, Samanth Subramanian
Rs. 198/-   Rs. 220
ಡಾ. ಎ ಪಿ ಜೆ ಅಬ್ದುಲ್ ಕಲಾಮ್ (ವಿಶ್ವಮಾನ್ಯರು)
ಅಸ್ಮಾ ಅನ್ಸಾರಿ, Asma Ansari
Rs. 27/-   Rs. 30
ಒಡೆದ ಕನ್ನಡಿ : ಜಗತ್ಪ್ರಸಿದ್ಧ ವ್ಯಕ್ತಿಗಳ ನುಡಿಚಿತ್ರಗಳು
ಮುಕ್ತವರಂ ಪಾರ್ಥಸಾರಥಿ, Muktavaram Parthasarathy
Rs. 72/-   Rs. 80
ಮುಗಿಲ ಮಾತು (ಐದು ಆಕಾಶವಾಣಿ ನಾಟಕಗಳ ಸಂಕಲನ)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.