|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಿ.ವಿ. ಕಾರಂತರು ಖ್ಯಾತ ನಟರು, ಸಂಗೀತ ನಿರ್ದೇಶಕರು ಹಾಗೂ ನಾಟಕ ಮತ್ತು ಚಿತ್ರ ನಿರ್ದೇಶಕರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಕಾರಂತರು ಸ್ವಾತಂತ್ರ್ಯ ಹೋರಾಟಗಾರರಾಗಿರುವ ವಿಷಯ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಗೋವಾ ಭಾರತದಲ್ಲಿ ವಿಲೀನವಾಗಿರಲಿಲ್ಲ. ನೆಹರು ಗೋವಾ ವಿಮೋಚನೆಯಲ್ಲಿ ಯುವಜನತೆ ಪಾಲುಗೊಳ್ಳಬೇಕು ಎಂದು ಕರೆ ನೀಡಿದಾಗ ಕಾರಂತರು 35 ಜನರ ಜೊತೆಯಲ್ಲಿ ಗೋವಾಕ್ಕೆ ಹೊರಟೇಬಿಟ್ಟರು. ಗೋವಾ ನಗರವನ್ನು ಪ್ರವೇಶಿಸಿ ‘ಭಾರತ ಮಾತಾಕಿ ಜೈ‘ ಘೋಷಣೆಯನ್ನು ಕೂಗುತ್ತಿರುವಂತೆಯೇ ಪೊಲೀಸರು ಮನಸ್ಸಿಗೆ ಬಂದಂತೆ ಲಾಠಿ ಚಾರ್ಜ್ ಮಾಡಿದರು. ಕಾರಮ್ತರ ಗಲ್ಲ ಮತ್ತು ತಲೆಗೆ ಪೆಟ್ಟು ಬಿದ್ದು ರಕ್ತ ಸುರಿಯಲಾರಂಭಿಸಿತು. ಒಬ್ಬ ಪೊಲೀಸ್ ಕಾಅಂತರ ಜುಟ್ಟು ಹಿಡಿದು ಬಸ್ಸಿಗೆ ಅಪ್ಪಳಿಸಿದನು. ಕೊನೆಗೆ ಪೊಲೀಸರು ಎಲ್ಲರನ್ನು ಸೈನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿ, ಒಂದು ಬಸ್ಸಿನಲ್ಲಿ ತುಂಬಿ ಊರ ಹೊರಗಿದ್ದ ಮಾಂಡವಿ ನದಿಯಲ್ಲೆಸೆದು ಹೋದರು. ಕೆಲವು ದಿನಗಳಲ್ಲಿ ಗೋವಾ ಹೊರಾಟ ತೀವ್ರವಾಗಿ ಗೋವಾ ವಿಮೋಚನೆಯಾಯಿತು. ಕಾರಂತರು ಹಾಗೂ ಅವರ ಸಂಗಡಿಗರಿಗೆ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಅದ್ಭುತ ಸ್ವಾಗತ ದೊರೆಯಿತು.
|
| |
|
|
|
|
|
|
|
|